
ಸುಳ್ಯ : ಪೆರಾಜೆ ಗ್ರಾಮದಲ್ಲಿ ಬೇಟೆಗಾರರೊಬ್ಬರು ಕಾಡು ಪ್ರಾಣಿ ಎಂದು ತಿಳಿದು ಸಾಕು ಕಾಪುಮಲೆ ಕುಂದಲ್ಪಾಡಿ ದಯಾಕರ ಅವರ ಸಾಕು ನಾಯಿಗೆ ಗುಂಡು ಹಾರಿಸಿದ ಪರಿಣಾಮ ಸಾಕು ನಾಯಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ರಾತ್ರಿ ಕಾಪುಮಲೆ ಕುಂದಲ್ಪಾಡಿ ದಯಾಕರ ಎಂಬವರ ಮನೆ ಬಳಿ ಬೇಟೆಗೆ ಬಂದ ವ್ಯಕ್ತಿಗಳು ದಯಾಕರ ಅವರ ಮನೆಯ ಸಾಕು ನಾಯಿಗೆ ರಾತ್ರಿ ಸುಮಾರು 11.30ಕ್ಕೆ ಗುಂಡು ಹೊಡೆದು ಪರಾರಿಯಾಗಿದ್ದಾರೆ.
ಗುಂಡು ಹಾರಿಸಿದ ಪರಿಣಾಮ ಸಾಕು ನಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಇದರಿಂದ ಮನೆಯವರು ಆಕ್ರೋಶಗೊಂಡಿದ್ದಾರೆ. ಬೇಟೆಗಾರರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.