ಹೆಜ್ಜೇನು ದಾಳಿಯಿಂದಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ನ. 27ರ ಬೆಳಗ್ಗೆ ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು ತಾಂಗಡಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರ ಮೇಲೆ ಹೆಜ್ಜೇನಿನ ಹಿಂಡು ದಾಳಿ ನಡೆಸಿತ್ತು.
ಪೇಜಾವರ ಪಡ್ಡೋಡಿಯ ನಿವಾಸಿ, ದಿನಪತ್ರಿಕೆ ವಿತರಕ ಪುಷ್ಪಾರಾಜ ಶೆಟ್ಟಿ (45) ಮೃತ ದುರ್ದೈವಿ. ಇವರು ನ. 28ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹೆಜ್ಜೇನಿನ ಹಿಂಡು ದಾಳಿಯಿಂದ ಇದರಿಂದಾಗಿ ತೀವ್ರ ಅಸ್ವಸ್ಥರಾಗಿದ್ದ ಪುಷ್ಪಾರಾಜ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಪೊರ್ಕೋಡಿ ಪರಿಸರದಲ್ಲಿ ಕಾಲ್ನಡಿಗೆಯಲ್ಲಿ ಹೋಗಿ ಮನೆಮನೆಗೆ ದಿನಪ್ರತಿಕೆಯನ್ನು ವಿತರಿಸುತ್ತಿದ್ದರು. ಮೃತರು ಅವಿವಾಹಿತರಾಗಿದ್ದು, ಮೂವರು ಸಹೋದರರು ಮತ್ತು ಸಹೋದರಿಯನ್ನು ಅಗಲಿದ್ದಾರೆ.