ವಿಟ್ಲ: ಅ. 6 ರ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ, ಪುತ್ತೂರು, ಬಂಟ್ವಾಳ, ಸುಳ್ಯ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಮಧ್ಯಾಹ್ನ ಶುರುವಾದ ಭಾರೀ ಮಳೆಯಿಂದ ನದಿಗಳು ಉಕ್ಕಿ ಹರಿದಿದೆ. ಈ ವೇಳೆ ಆಯತಪ್ಪಿ ನದಿಗೆ ಬಿದ್ದ ಮುಸ್ಲಿಂ ವ್ಯಕ್ತಿಯನ್ನು ಯುವಕರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಬಂಟ್ವಾಳ ತಾಲೂಕಿನ ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆಯ ವೇಳೆ ಸಂಜೆ ಸುಮಾರು 6:30 ರ ಹೊತ್ತಿಗೆ ವ್ಯಕ್ತಿಯೊಬ್ಬರು ಸೇತುವೆ ವೇಳೆ ಹೋಗುತ್ತಿದ್ದಾಗ ಆಯತಪ್ಪಿ ನದಿಗೆ ಬಿದ್ದಿದ್ದಾರೆ.
ಕೂಡಲೇ ಅಲ್ಲೇ ಇದ್ದ ಯುವಕರು ನದಿಯ ಪ್ರವಾಹವನ್ನೂ ಲೆಕ್ಕಿಸದೆ ಹಾರಿ ಈಜಾಡಿಕೊಂಡು ಹೋಗಿ ರಕ್ಷಣೆ ಮಾಡಿ ಅಪಾಯದಿಂದ ರಕ್ಷಿಸಿದ್ದಾರೆ. ಚೆಕ್ಕಿದಕಾಡು ನಿವಾಸಿಗಳಾದ ಅಶೋಕ್ ಸಿ.ಹೆಚ್ ಹಾಗೂ ಸುರೇಶ್ ಸಿಎಚ್ ರಕ್ಷಣೆ ಮಾಡಿದ ಯುವಕರು. ಸುಮಾರು 70ರ ಹರೆಯದ ಉಮ್ಮರ್ ರಕ್ಷಿಸಲ್ಪಟ್ಟವರು.
ಉಮ್ಮರ್ ಅವರು ಹೊಳೆಗೆ ಬೀಳುವುದನ್ನು ನೋಡಿದ ಕೂಡಲೇ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಇಬ್ಬರು ಯುವಕರು ನದಿಗೆ ಹಾರಿ ಈಜಾಡಿಕೊಂಡು ಹೋಗಿ ಉಮ್ಮರ್ ಅವರನ್ನು ರಕ್ಷಿಸಿದ್ದಾರೆ. ಕೂಡಲೇ ಸ್ಥಳದಲ್ಲೇ ಇದ್ದ ಸ್ಥಳೀಯರು ಸಾಥ್ ಕೊಟ್ಟಿದ್ದಾರೆ. ಯುವಕರ ಸಮಯಪ್ರಜ್ಞೆಗೆ ಎಲ್ಲರು ಭೇಷ್ ಅಂದಿದ್ದಾರೆ.
ಸೇತುವೆಗೆ ಯಾವುದೇ ರೀತಿಯ ತಡೆ ಇಲ್ಲದೆ ಇರುವುದು ಇದಕ್ಕೆ ಕಾರಣವಾಗಿದೆ. ಈ ಹಿಂದೆಯೂ ಇಂತಹದ್ದೇ ಘಟನೆ ವರದಿಯಾಗಿತ್ತು. ಸೇತುವೆಯ ಮೇಲಿಂದ ನೂರಾರು ಮಂದಿ ಹೋಗುತ್ತಿದ್ದು ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ವೃದ್ದರು, ಮಕ್ಕಳು ಹೀಗೆ ನೂರಾರು ಮಂದಿ ಪ್ರಯಾಣ ಮಾಡುತ್ತಾರೆ. ಈ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ವಹಿಸಬೇಕಾಗಿದೆ.
At around 6:30 in the evening of October 6th. A person fell into the river while crossing the dam bridge at , Surambadka, Vitla. Immediately, the youths who were there, regardless of the flooded river, jumped and swam to safety and saved them from danger. Ashok CH and Suresh CH, residents of Chekkidakadu, are the youths who have been rescued. Ummar, aged around 70, was rescued.