ಸುರತ್ಕಲ್ : “ನನ್ನ ಜತೆ ಸಹಕರಿಸು, ಇಲ್ಲಾಂದ್ರೆ 24 ತುಂಡು ಮಾಡುವೆ” ಎಂದು ಬೆದರಿಕೆ ಸಂದೇಶ ಕಳುಹಿಸಿ ಮುಸ್ಲಿಂ ಯುವಕನೊಬ್ಬನ ನಿರಂತರ ಕಿರುಕುಳದಿಂದ ಬೇಸತ್ತ ಯುವತಿ ಆತ್ಮಹತ್ಯೆ ಯತ್ನಿಸಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ನಲ್ಲಿ ನಡೆದಿದೆ.
ಸುರತ್ಕಲ್ ಇಡ್ಯಾದ ಸದಾಶಿವನಗರದ ನಿವಾಸಿ ಮುಸ್ಲಿಂ ಯುವಕರಾದ ಶಾರಿಕ್ ಹಾಗೂ ನೂರ್ಜಹಾನ್ ಎಂಬವರು ಹಿಂದೂ ಯುವತಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಸದ್ಯ ಪೊಲೀಸರು ಓರ್ವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈತ ಯುವತಿಯ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ಆಕೆಯ ಸಹೋದರನಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದಲ್ಲದೆ ಬೆದರಿಕೆಯೊಡ್ಡಿದ್ದ. ಅಲ್ಲದೆ ಯುವತಿಯ ಸಹೋದರನಿಗೆ ವಾಟ್ಸ್ ಆಪ್ ಮೆಸೇಜ್ ಮಾಡಿ ಧಮ್ಕಿ ಹಾಕಿದ್ದ ಎನ್ನಲಾಗಿದೆ. ಇವರ ನಿರಂತರ ಕಿರುಕುಳದಿಂದ ಬೇಸತ್ತು ಯುವತಿ ಆತ್ಮಹತ್ಯೆ ಯತ್ನಿಸಿದ್ದಾಳೆ.
ಈ ಹಿಂದೆಯೇ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಗಿತ್ತು. ಆ ಬಳಿಕವೂ ನಿರಂತರ ಮೆಸೇಜ್ ಹಿನ್ನೆಲೆಯಲ್ಲಿ ಮನನೊಂದ ಯುವತಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆತ್ಮಹತ್ಯೆ ಯತ್ನಕ್ಕೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಳು.
“ಒಬ್ಬ ಮುಸ್ಲಿಮನ ಕೈಯ್ಯಲ್ಲಿ ಅತ್ಯಾಚಾರವಾಗಿ ಸಾಯುವ ಬದಲು ಈಗಲೇ ಸಾಯ್ತನೆ”. ಆದರೆ ಶಾರೀಕ್ ಹಾಗೂ ನೂರ್ಜಾನ್ ಇಬ್ಬರನ್ನು ಬಿಡಬಾರದು ಎಂದು ಡೆತ್ ನೋಟ್ ನಲ್ಲಿ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ.
The incident took place in Surathkal, Mangalore outskirts, where a young woman, who was fed up with the continuous harassment of a Muslim youth by sending a threatening message saying “I will cut you into 24 pieces”, attempted suicide. Muslim youths named Shariq and Noorjahan were harassing the Hindu girl