ಮಂಗಳೂರು: ಆಕಸ್ಮಿಕವಾಗಿ ಗುಂಡು ತಗುಲಿ ವ್ಯಕ್ತಿ ಗಾಯಗೊಂಡ ಘಟನೆ ವಾಮಂಜೂರಿನಲ್ಲಿ ನಡೆದಿದೆ.
ಸಫ್ವಾನ್ ಎಂಬಾತ ಗಾಯಗೊಂಡ ವ್ಯಕ್ತಿಯಾಗಿದ್ದಾನೆ.
ವಾಮಂಜೂರಿನ ಗ್ಯಾರೇಜ್ ಒಂದರಲ್ಲಿ ಈ ಘಟನೆ ನಡೆದಿದೆ. ರಿವಾಲ್ವರ್ ಒಂದನ್ನು ಸಫ್ವಾನ್ ಪರಿಶೀಲಿಸುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದ್ದು ಪರಿಣಾಮ ಸಫ್ವಾನ್ ಹೊಟ್ಟೆಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ. ಇದೊಂದು ಆಕಸ್ಮಿಕ ಘಟನೆ ಎಂದು ತಿಳಿದುಬಂದಿದೆ.
ಭಾಸ್ಕರ್ ಎಂಬವರಿಗೆ ಸೇರಿದ ಗನ್ ಇದಾಗಿದ್ದು, ಅವರು ಗನ್ ಅನ್ನು ಟೇಬಲ್ ಮೇಲಿರಿಸಿ ವಾಶ್ ರೂಂ ಗೆಂದು ತೆರಳಿದ್ದರು. ಈ ವೇಳೆ ಸೆಕೆಂಡ್ ಹ್ಯಾಂಡ್ ಬಜಾರ್ ಗೆ ಖರೀದಿಗೆ ಬಂದಿದ್ದ ಸಫ್ವಾನ್ ಆಟದ ವಸ್ತುವೆಂದು ಭಾವಿಸಿ ಹೊಟ್ಟೆಯ ಮೇಲಿಟ್ಟು ಶೂಟ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
