Mangalore and Udupi news
Blogಅಪರಾಧದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಗಳೂರು: 18 ವರ್ಷದ ವಿದ್ಯಾರ್ಥಿನಿ ನಾಪತ್ತೆ – ಸುಳಿವು ಸಿಕ್ಕರೆ ತಕ್ಷಣ ಸಂಪರ್ಕಿಸುವಂತೆ ಮನವಿ.!!

ಮಂಗಳೂರು : ಇಂಜಿನಿಯರಿ0ಗ್ ವಿದ್ಯಾರ್ಥಿನಿಯೋಬ್ಬಳು ನಾಪತ್ತೆಯಾದ ಘಟನೆ ನಡೆದಿದ್ದು, ಮಗಳ ಪತ್ತೆಗಾಗಿ ತಾಯಿ ಮನವಿ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರು ನಿವಾಸಿ 18 ವರ್ಷದ ಸ್ಪೂರ್ತಿ ಎಂಬಾಕೆ ನಾಪತ್ತೆಯಾಗಿರುವ ವಿದ್ಯಾರ್ಥಿನಿ. ನ.16ರಿಂದ ಕಾಣೆಯಾಗಿದ್ದಾಳೆ ಎನ್ನಲಾಗಿದೆ.

ನ.16ರಂದು ತಾಯಿಗೆ ಕರೆ ಮಾಡಿದ ಸ್ಪೂರ್ತಿ ಪಿಜಿಯಿಂದ ಕಾಲೇಜಿಗೆ ಹೋಗಿ ಬಳಿಕ ಚಿಕ್ಕಮಗಳೂರಿನಲ್ಲಿರುವ ಮನೆಗೆ ಬರುವುದಾಗಿ ತಿಳಿಸಿದ್ದಳು. ಅದರಂತೆ ರಾತ್ರಿ 11ಕ್ಕೆ ತಾನು ಆಕೆಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಬಂದಿದ್ದು, ನಂತರ ಸ್ಪೂರ್ತಿ ಯಾವುದೇ ರೀತಿಯ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ನ.17ರ0ದು ಮಂಗಳೂರಿಗೆ ಬಂದು ಪಿಜಿ ಹಾಗೂ ಕಾಲೇಜಿನ ಪ್ರಾಧ್ಯಾಪಕರು, ಸ್ನೇಹಿತರಲ್ಲಿ ವಿಚಾರಿಸಿದರೂ ಆಕೆ ಪತ್ತೆಯಾಗಿಲ್ಲ ಎಂದು ಸ್ಫೂರ್ತಿಯ ತಾಯಿ ಗಾಯತ್ರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ನಗರದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Comment