Mangalore and Udupi news
ಕಾಸರಗೋಡುರಾಜ್ಯ

ಮಕ್ಕಳಿಗೆ ರಂಬುಟಾನ್ ಹಣ್ಣು ಕೊಡುವಾಗ ಎಚ್ಚರ: ಗಂಟಲಿಗೆ ಸಿಲುಕಿ ಬಾಲಕಿ ಸಾವು.!

ರಂಬುಟಾನ್ ಹಣ್ಣು ತಿನ್ನುವಾಗ ಗಂಟಲಿನಲ್ಲಿ ಹಣ್ಣು ಸಿಲುಕಿ 6 ವರ್ಷದ ಬಾಲಕಿ ಮೃತಪಟ್ಟ ಘಟನೆರ ಕೇರಳದ ಪೆರುಂಬವೂರಿನಲ್ಲಿ ಸಂಭವಿಸಿದೆ.

ಕೇರಳದ ಪೆರುಂಬವೂರಿನ ಕಂಡಂತರ ಚಿರಾಯತುವೀಟ್ ನಲ್ಲಿ ಮನ್ಸೂರ್ ಅವರ ಪುತ್ರಿ ನೂರಾ ಫಾತಿಮಾ (6) ಮೃತ ಬಾಲಕಿಯಾಗಿದ್ದಾಳೆ.

ಯು.ಕೆ.ಜಿ. ವಿದ್ಯಾರ್ಥಿನಿಯಾಗಿರುವ ನೂರ್ ಫಾತಿಮಾ ಭಾನುವಾರ ಸಂಜೆ ಮನೆಯಲ್ಲಿ ಇತರ ಮಕ್ಕಳೊಂದಿಗೆ ರಂಬುಟಾನ್ ತಿನ್ನುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಗಂಟಲಲ್ಲಿ ರಂಬುಟನ್ ಹಣ್ಣಿನ ಬೀಜ ಸಿಲುಕಿದ್ದ ಕಾರಣ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಬಾಲಕಿ ಮೃತಪಟ್ಟಿದ್ದಳು.

Related posts

Leave a Comment