ವಾಹನಗಳ ಗುಣಮಟ್ಟ ಹಾಗೂ ಕಳಪೆ ಸರ್ವೀಸ್‌ಗೆ ಬೇಸತ್ತ ಗ್ರಾಹಕರು ಸಿಟ್ಟಿನಿಂದ ಏನು ಬೇಕಾದರೂ ಮಾಡುತ್ತಾರೆ. ಕತ್ತೆಯಿಂದ ಕಾರು ಎಳೆಯುವುದು, ಶೋ ರೂಮ್ ಮುಂಭಾಗ ಧರಣಿ ಕುಳಿತುಕೊಳ್ಳುವುದು. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುವುದನ್ನು ಕೇಳಿದ್ದೇವೆ. ಇಲ್ಲೊಬ್ಬ ಗ್ರಾಹಕ ತನ್ನ ಎಲೆಕ್ಟಿçಕ್ ವಾಹನ ಸರ್ವೀಸ್ ಮಾಡಿದ್ದಕ್ಕೆ ಸಾವಿರಾರು ರೂ ಬಿಲ್ ನೋಡಿ ಕಂಗಾಲು ಆಗಿದ್ದಾನೆ. ರೊಚ್ಚಿಗೆದ್ದ ಗ್ರಾಹಕ ಮಾಡಿದ್ದೇನು?
ಶೋರೂಂ ಎದುರು ವ್ಯಕ್ತಿಯೊಬ್ಬ ತನ್ನ ಓಲಾ ಸ್ಕೂಟರ್‌ನ್ನು ಸುತ್ತಿಗೆಯಿಂದ ಹೊಡೆದು ಪುಡಿ ಪುಡಿ ಮಾಡುತ್ತಿರುವ ದೃಶ್ಯವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಶೋ ರೂಮ್‌ನವರು ವಾಹನದ ಸರ್ವಿಸ್ ಮಾಡಿದ್ದಕ್ಕೆ 90 ಸಾವಿರ ರೂಪಾಯಿ ಬಿಲ್ ಮಾಡಿದ್ದಾರೆ. ಇದರಿಂದ ಕಂಗಾಲಾದ ವ್ಯಕ್ತಿ ಸ್ಕೂಟರ್??ನ್ನು ಶೋರೂಂ ಮುಂದೆಯೇ ಒಡೆದು ಹಾಕಿದ್ದಾನೆ.
https://x.com/nedricknews/status/1859858536261615992
ಓಲಾ ಸ್ಕೂಟರ್?ನ ಆನ್ ರೋಡ್ ಬೆಲೆಯೇ 1.52 ಲಕ್ಷ ರೂಪಾಯಿಯಷ್ಟು ಇದೆ. ಇನ್ನು ಕೇವಲ ಸರ್ವಿಸ್ ಮಾಡಿದ್ದಕ್ಕೆ 90 ಸಾವಿರ ರೂಪಾಯಿ ಬಿಲ್ ಮಾಡಿದ್ದಕ್ಕೆ ವ್ಯಕ್ತಿ ರೊಚ್ಚಿಗೆದ್ದಿದ್ದಾನೆ. ಬಿಳಿ ಟೀಶರ್ಟ್ ಹಾಕಿಕೊಂಡಿದ್ದ ಯುವಕ ಮೊದಲು ಸುತ್ತಿಗೆಯಿಂದ ಹೊಡೆದು ಹೊಡೆದು ಓಲಾ ಸ್ಕೂಟರ್ ನ್ನು ಪುಡಿ ಪುಡಿ ಮಾಡಿದ ಬಳಿಕ ಮತ್ತೊಬ್ಬ ವ್ಯಕ್ತಿಯ ಕೈಗೆ ಸುತ್ತಿಗೆ ಕೊಡುತ್ತಾನೆ ಅವನು ಕೂಡ ಸ್ಕೂಟರ್ ಮೇಲೆ ಎರಡು ಏಟು ಹಾಕಿ ಆಕ್ರೋಶ ತಣ್ಣಗೆ ಮಾಡಿಕೊಳ್ಳುತ್ತಾನೆ.
ಸದ್ಯ ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರ ತಹರೇವಾರಿಯಾಗಿ ಕಮೆಂಟ್ ಹಾಕುತ್ತಿದ್ದಾರೆ. ಈ ಎಲೆಕ್ಟ್ರಿಕ್ ವಾಹನಗಳ ಕಂಪನಿಗಳೆಲ್ಲವೂ ಮೋಸಗಾರ ಕಂಪನಿಗಳೇ ಎಂದು ಹೇಳುವ ಮಟ್ಟಕ್ಕೆ ಪ್ರತಿಕ್ರಿಯೆಗಳು ಬರುತ್ತಿವೆ. ಇನ್ನೂ ಕೆಲವರು ಈ ಹುಚ್ಚಾಟವನ್ನು ಮಾಡುವ ಬದಲು ಕಂಪನಿ ವಿರುದ್ಧ ದೂರು ಕೊಟ್ಟಿದ್ದರೆ ಆಗುತ್ತಿರಲಿಲ್ವಾ ಎಂದು ಸಲಹೆಯನ್ನು ಕೂಡ ನೀಡಿದ್ದಾರೆ..