Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದೇಶ- ವಿದೇಶಪ್ರಸ್ತುತರಾಜ್ಯ

ಮತ್ತೊಂದು ಫ್ರಿಡ್ಜ್ ಪ್ರಕರಣ: ಯುವತಿಯನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್’ನಲ್ಲಿಟ್ಟ ಭೂಪ.!!

ಫ್ರಿಡ್ಜ್ ಮರ್ಡರ್ ಕೇಸ್ ಅಂದ್ರೆ ಸಾಕು ಇಡೀ ದೇಶಕ್ಕೆ ಗೊತ್ತು. ಅಂತಹ ಭೀಕರ ಕೊಲೆ ಪ್ರಕರಣ ನಡೆದಿತ್ತು, ಅದುವೇ ಶ್ರದ್ಧಾ ವಾಕರ್ ಹಾಗೂ ಬೆಂಗಳೂರಿನಲ್ಲಿ ನಡೆದಿದ್ದ ಮಹಾಲಕ್ಷ್ಮಿ ಪ್ರಕರಣ. ಈ ಘಟನೆ ಮಾಸುವ ಮುನ್ನವೇ ಮಧ್ಯಪ್ರದೇಶದಲ್ಲೂ ಇಂತಹದೇ ಪ್ರಕರಣವೊಂದು ನಡೆದಿದೆ.

ಶ್ರದ್ಧಾ ವಾಕರ್ ಕೇಸ್, ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ನಡೆದಿದ್ದ ಮಹಾಲಕ್ಷ್ಮಿ ಕೇಸ್ ಪ್ರತಿಯೊಬ್ಬರಿಗೂ ಪಾಠವಾಗಬೇಕಿತ್ತು. ಆದರೆ ಈ ಪ್ರಕರಣದಿಂದ ಹಲವರು ಸ್ಪೂರ್ತಿ ಪಡೆದಿದ್ದಾರಾ ಅನ್ನೋ ಅನುಮಾನ ಹೆಚ್ಚಾಗ ತೊಡಗಿದೆ. 8 ತಿಂಗಳ ಹಿಂದೆ ಲೀವ್ ಇನ್ ಪಾರ್ಟ್ನರ್ ಕೊಂದು ಫ್ರಿಡ್ಜ್‌ನಲ್ಲಿಟ್ಟ ಪ್ರಕರಣ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶದ ದೀವಾಸ್‌ನಲ್ಲಿ 8 ತಿಂಗಳ ಬಳಿಕ ಮಹಿಳೆಯ ಶವ ಫ್ರಿಡ್ಜ್‌ನಲ್ಲಿಟ್ಟಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಸಂಜಯ್ ಪಾಟೀದಾರ್ ಈ ಕೃತ್ಯದ ಆರೋಪಿ. ಸಂಜಯ್ ಪಾಟೀದಾರ್ ಎಂಬ ವಿವಾಹಿತ ವ್ಯಕ್ತಿಯಿಂದ ಪಿಂಕಿ ಪ್ರಜಾಪತಿ ಎಂಬ ಮಹಿಳೆಯ ಬರ್ಬರ ಹತ್ಯೆಯಾಗಿದೆ.

ಕಳೆದ 5 ವರ್ಷದಿಂದ ಪಿಂಕಿ ಪ್ರಜಾಪತಿ ಜೊತೆ ಸಂಜಯ್ ಪಾಟೀದಾರ್‌ ಲೀವ್ ಇನ್ ರಿಲೇಷನ್ ಶಿಪ್‌ನಲ್ಲಿದ್ದ. ಪಿಂಕಿ, ಸಂಜಯ್‌ಗೆ ಮದುವೆಯಾಗುವಂತೆ ಒತ್ತಾಯಿಸಿದ್ದಳು. ಮದುವೆಯಾಗುವಂತೆ ಒತ್ತಾಯಿಸಿದ್ದರಿಂದ ಸಂಜಯ್ ಪಾಟೀದಾರ್‌ ಸ್ನೇಹಿತನ ಸಹಾಯ ಪಡೆದು ಈ ಕೃತ್ಯ ಎಸೆಗಿದ್ದಾನೆ.

ಹತ್ಯೆ ಬಳಿಕ ಮೃತದೇಹವನ್ನು ಫ್ರಿಡ್ಜ್‌ಗೆ ತುರುಕಿದ್ದ. ಇದಕ್ಕಾಗಿ ಫ್ರಿಡ್ಜ್ ಒಳಗಿನ ಎಲ್ಲಾ ಕಂಪಾರ್ಟ್‌ಮೆಂಟ್ ತೆಗೆದಿದ್ದ. ಫ್ರೀಜರ್‌ನಿಂದ ಹಿಡಿದು ಕೊನೆಯ ತರಕಾರಿ ಇಡುವ ಜಾಗದ ವರೆಗೆ ಒಂದೇ ಕಂಪಾರ್ಟ್‌ಮೆಂಂಟ್ ರೀತಿ ಮಾಡಿ ಮೃತದೇಹವನ್ನು ಫ್ರಿಡ್ಜ್‌ನಲ್ಲಿ ತುರುಕಿದ್ದ. ಫ್ರಿಡ್ಜ್ ಸೇರಿದಂತೆ ಬಳಿಕ ತನ್ನ ಎಲ್ಲಾ ವಸ್ತುಗಳನ್ನು ಒಂದು ಕೊಠಡಿಯಲ್ಲಿಟ್ಟು ಬೀಗ ಹಾಕಿದ್ದ.

2024ರ ಜೂನ್ ತಿಂಗಳಲ್ಲೇ ಸಂಜಯ್ ಪಾಟೀದಾರ್ ತನ್ನ ಲೀವ್ ಇನ್ ರಿಲೇಷನ್ ಗೆಳತಿ ಪಿಂಕಿ ಪ್ರಜಾಪತಿಯ ಜೀವ ತೆಗೆದಿದ್ದಾನೆ. ಜೂನ್ 2024ರಂದೇ ಸಂಜಯ್ ಪಾಟೀದಾರ್​ ಮನೆಯನ್ನು ಖಾಲಿ ಮಾಡಿಕೊಂಡು ಹೋಗಿದ್ದಾನೆ. ಆದರೂ ತನಗೆ ಸಂಬಂಧಪಟ್ಟಿದ್ದ ಕೆಲವು ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ರೆಫ್ರಿಜೇಟರ್​ ಸೇರಿದಂತೆ ಹಲವು ವಸ್ತುಗಳನ್ನು ಬಿಟ್ಟು ಹೋಗಿದ್ದಾನೆ.

ಜುಲೈ 2024ರಂದು ಉಜ್ಜೈನಿಯ ಬಲವೀರ್ ರಜಪೂತ್ ಎನ್ನುವವರು ಬಾಡಿಗೆ ಪಡೆದುಕೊಂಡಿದ್ದರು. ಕಳೆದ ಎರಡು ತಿಂಗಳಿಂದ ಆ ಮನೆಯ ಎರಡು ರೂಮ್​ಗಳನ್ನು ನಾನು ಬಳಸಿಲ್ಲ. ಕಾರಣ ಪಾಟೀದಾರ್ ಅವುಗಳನ್ನು ಲಾಕ್ ಮಾಡಿಕೊಂಡು ಹೋಗಿದ್ದ ಎಂದು ಹೇಳಿದ್ದಾರೆ. ಇದಾದ ಕೆಲವು ದಿನಗಳ ಬಳಿಕ ಮನೆಗೆ ಬಂದ ಬಲವೀರ್ ರಜಪೂತ್, ಎರಡು ಕೋಣೆಗಳನ್ನು ಖಾಲಿ ಮಾಡಿ ಕೊಡುವಂತೆ ಕೇಳಿದ್ದಾನೆ. ಕೊನೆಗೆ ಗುರುವಾರದಂದು ಬಲವೀರ್ ಎರಡು ಕೋಣೆಯ ಬೀಗಗಳನ್ನು ಒಡೆದು ನೋಡಿದಾಗ, ವಿಪರೀತ ವಿದ್ಯುತ್ ಬಿಲ್ ಈ ಈ ರೆಫ್ರಿಜೇಟರ್​ನಿಂದಲೇ ಬರುತ್ತಿದೆ ಎಂದು ರೆಫ್ರಿಜೇಟರ್​ ಸ್ವಿಚ್​ನ್ನು ಆಫ್ ಮಾಡಿದ್ದಾನೆ.

ಮಾರನೇ ದಿನ ಇಡೀ ಏರಿಯಾಗೆ ದುರ್ವಾಸನೆಯೊಂದು ಹರಡಿಕೊಂಡಿದೆ. ಸ್ಥಳೀಯರು ಪೊಲೀಸರಿಗೆ ಕಂಪ್ಲೆಂಟ್ ಮಾಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ರೆಫ್ರಿಜೇಟರ್​ ಓಪನ್ ಮಾಡಿ ನೋಡಿದಾಗ ಡಿಕಂಪೋಸ್ಡ್​ ಆಗಿ ಬಿದ್ದಿ ಮೃತದೇಹದ ತುಂಡುಗಳನ್ನು ಬೆಡ್​ಶೀಟ್​ನಲ್ಲಿ ಸುತ್ತಿ ಇಡಲಾಗಿದ್ದು ಕಂಡು ಬಂದಿದೆ. ಕೊನೆಗೆ ವಿಚಾರಣೆ ಮಾಡಿದಾಗ ಪೊಲೀಸರಿಗೆ ಸಂಜಯ್ ಪಾಟೀದಾರ್ ಜೊತೆಗೆ ಇರುತ್ತಿರುವುದನ್ನು ಕನ್ಫರ್ಮ್ ಮಾಡಿದ್ದಾರೆ.

ಸಂಜಯ್​ ಬೆನ್ನು ಬಿದ್ದ ಪೊಲೀಸರು ಕೊನೆಗೂ ಆತನನ್ನು ಬಲೆಗೆ ಕೆಡವಿದ್ದಾರೆ. ವಿಚಾರಣೆ ವೇಳೆ ಬಲಿಪಶುವಾಗಿದ್ದು ಯುವತಿಯ ಹೆಸರು ಪ್ರತಿಭಾ ಕಳೆದ ಐದು ವರ್ಷಗಳಿಂದ ನಾವು ಲೀವ್ ಇನ್ ರಿಲೇಷನ್​ಶಿಪ್​ನಲ್ಲಿ ಇದ್ವಿ, ಮೂರು ವರ್ಷ ಉಜ್ಜೈಯನಿಯಲ್ಲಿ ವಾಸವಿದ್ವಿ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.

ಪಾಟೀದಾರ್​ ತನ್ನ ತಪ್ಪೊಪ್ಪಿಗೆಯಲ್ಲಿ ನನಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿವೆ. ಆದ್ರೆ ಪ್ರತಿಭಾ ಕೂಡ ನನ್ನನ್ನು ಮದುವೆಯಾಗು ಎಂದು ಪದೇ ಪದೇ ಪೀಡಿಸತೊಡಗಿದಳು. ಕೋಪ ಮತ್ತು ಹತಾಶೆಗೊಂಡ ನಾನು ಅವಳನ್ನು ಹತ್ಯೆ ಮಾಡಿದೆ ಎಂದು ಹೇಳಿದ್ದಾನೆ. ಕೊಲೆ ಮಾಡುವುದಕ್ಕೂ ಮೊದಲು ನಾನು ಅವಳ ಬಳಿ ಬ್ರೇಕ್ ಅಪ್ ಮಾಡಿಕೊಳ್ಳೊಣ ಅಂತ ಹೇಳಿದೆ ಆದರೂ ಕೂಡ ಅವಳು ಮದುವೆ ಮಾಡಿಕೋ ಎಂದು ಹಠ ಹಿಡಿದಳು ಹೀಗಾಗಿ ನಾನು ಅವಳ ಜೀವ ತೆಗೆದೆ ಎಂದು ಹೇಳಿದ್ದಾನೆ.

Advertisement

Related posts

Leave a Comment