Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಗಳೂರು: ಆನ್ ಲೈನ್ ವಂಚನೆ ಹೂಡಿಕೆ ಹೆಸರಲ್ಲಿ ವ್ಯಕ್ತಿಗೆ 7.30 ಲಕ್ಷ ಪಂಗನಾಮ.!!

ಮಂಗಳೂರು : ಎಷ್ಟೇ ಜಾಗೃತರಾಗಿ ಎಂದು ಸಂದೇಶ ಬಂದರು ಆನ್ ಲೈನ್ ವಂಚನೆಗೆ ಜನರು ಪದೇ ಪದೇ ಬಲಿಯಾಗುತ್ತಿದ್ದಾರೆ. ಲಕ್ಷ ಲಕ್ಷ ಹಣ ವಂಚಕರ ಪಾಲಾಗುತ್ತಿರುವ ಘಟನೆಗಳು ಸದ್ಯ ಹೆಚ್ಚಾಗಿ ಬೆಳಕಿಗೆ ಬುರುತ್ತಿವೆ. ವೆಬ್‌ಸೈಟ್ ಮೂಲಕ ಹಣವನ್ನು ಹೂಡಿಕೆ ಮಾಡಿಸಿ 7.30 ಲ.ರೂ ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇರಾ ಪಾಂಡೆ ಎಂಬಾಕೆ ಡೇಟಿಂಗ್ ಆಪ್ ಮೂಲಕ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡು ಸ್ಪ್ರೆಡೆಕ್ಸ್ ಎಂಬ ವೆಬ್‌ಸೈಟ್ ಮೂಲಕ ಹಣ ಹೂಡಿಕೆ ಮಾಡುವಂತೆ ತಿಳಿಸಿ ಅದೇ ವೆಬ್‌ಸೈಟ್‌ನ್ನು ಹೋಲುವಂತಹ ಬೇರೊಂದು ವೆಬ್‌ಸೈಟ್ ಲಿಂಕ್ ಕಳುಹಿಸಿದ್ದಳು. ಬಳಿಕ ವ್ಯಕ್ತಿ ಹಂತ ಹಂತವಾಗಿ 8.50 ಲ.ರೂ. ಹೂಡಿಕೆ ಮಾಡಿದ್ದಾರೆ.

ಈ ಪೈಕಿ 1.20 ಲ.ರೂ. ವಿತ್‌ಡ್ರಾ ಮಾಡಿದ್ದಾರೆ. ಉಳಿದ 7.30 ಲ.ರೂ. ವಿತ್‌ಡ್ರಾ ಮಾಡಲು ಯತ್ನಿಸಿದಾಗ ಶೇ.30ರಷ್ಟು ತೆರಿಗೆ ಪಾವತಿಸಬೇಕು ಎಂದು ಇರಾ ಪಾಂಡೆ ತಿಳಿಸಿದ್ದಾಳೆ. ಈ ವೇಳೆ ತಾನು ಮೋಸ ಹೋಗಿರುವುದು ತಿಳಿಯಿತು ಎಂದು ವಂಚನೆಗೊಳಗಾದ ವ್ಯಕ್ತಿಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎಚ್ಚರ… ಎಚ್ಚರ.. ಎಂದರು ಯಾಕೆ ಜನರಿಗೆ ಅರ್ಥವಾಗಲ್ಲ.!!

ಇತಂಹ ಮೋಸದ ಜಾಲ ಎಷ್ಟೇ ನಡೆದರೂ, ಸದ್ಯದ ಟೆಕ್ನೋಲಜಿ ಎಷ್ಟು ಮುಂದುವರಿದಿದೆ ಎಂದು ಹೇಳುವ ಅಗತ್ಯವಿಲ್ಲ. ಜನರಿಗೆ ಇದರ ಬಗ್ಗೆ ಎಷ್ಟೇ ಅರಿವಿದ್ದರೂ ಹೆಚ್ಚಿನ ಹಣ ಗಳಿಸುವ ಆಸೆ, ಆನ್ ಲೈನ್ ಹೆಣ್ಣಿನ ಮೋಹಕ್ಕೆ ಒಳಗಾಗಿ ಲಕ್ಷಗಟ್ಟಲೇ ವಂಚಕರ ಪಾಲಿಗೆ ನೀಡುತ್ತಿದ್ದಾರೆ ಜನ. ಎಷ್ಟೇ ಜಾಗೃತರಾಗಿ ಎಂದು ಸಂದೇಶ ಬಂದರು ಆನ್ ಲೈನ್ ವಂಚನೆಗೆ ಜನರು ಪದೇ ಪದೇ ಬಲಿಯಾಗುತ್ತಿದ್ದಾರೆ. ಲಕ್ಷ ಲಕ್ಷ ಹಣ ವಂಚಕರ ಪಾಲಾಗುತ್ತಿರುವ ಘಟನೆಗಳು ಸದ್ಯ ಹೆಚ್ಚಾಗಿ ನಡೆಯುತ್ತಿದೆ.

Related posts

Leave a Comment