ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಡ್ರಗ್ಸ್ ಜಾಲ ಜಾಸ್ತಿಯಾಗುತ್ತಲೇ ಇದೆ. ಮಾದಕ ವ್ಯಸನದಿಂದ ಕ್ರೈಂ ವೇಗವಾಗಿ ಜಾಸ್ತಿ ಆಗುತ್ತಿದೆ. ಹಾಗಾಗಿ ಡ್ರಗ್ಸ್ ನಿಯಂತ್ರಣ ಮಾಡುವುದಕ್ಕೆ ಬೆಂಗಳೂರು ಪೊಲೀಸರು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಆದರೆ ಪೊಲೀಸರು ಎಷ್ಟೆ ಪ್ರಯತ್ನ ನಡೆಸಿದ್ರೂ, ಒಂದಲ್ಲೊ0ದು ಮಾರ್ಗದಲ್ಲಿ ಮಾದಕವಸ್ತುಗಳು ಬೆಂಗಳೂರು ಸೇರುತ್ತಿದೆ.
ಹೀಗೆ ಕಳೆದ ಸೆಪ್ಟೆಂಬರ್‌ನಲ್ಲಿ ನಗರದ ಎಚ್‌ಆರ್‌ಎಸ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎರಡು ಡ್ರಗ್ಸ್ ಕೇಸ್‌ಗಳು ವರದಿಯಾಗಿದ್ದವು. ಆ ಎರಡು ಪ್ರಕರಣಗಳ ಬೆನ್ನತ್ತಿದ ಪೊಲೀಸರಿಗೆ ಮಾದಕ ಲೋಕದ ಸಮುದ್ರವೇ ಸಿಕ್ಕಿದೆ.
ಅಂದಹಾಗೇ ಎಲ್ಲಾ ಡ್ರಗ್ಸ್ ಕೂಡ ವಿದೇಶಗಳಿಂದ ನಗರಕ್ಕೆ ಸರಬರಾಜು ಆಗುತ್ತಿದ್ದು, ಪೊಲೀಸರ ಪರಿಶೀಲನೆ ವೇಳೆ ಅದು ಭಾರತೀಯ ಅಂಚೆ ಇಲಾಖೆ ಮೂಲಕ ಬಂದಿರುವುದು ಗೊತ್ತಾಗಿದೆ. ಬಳಿಕ ಪ್ರಕರಣದ ಜಾಡು ಹಿಡಿದ ಸಿಸಿಬಿ ಪೊಲೀಸರು, ಕಸ್ಟಮ್ಸ್ ಅಧಿಕಾರಗಳ ಸಹಯೋಗದೊಂದಿಗೆ ಚಾಮರಾಜಪೇಟೆಯಲ್ಲಿರುವ ವಿದೇಶಿ ಪೋಸ್ಟ್ ಆಫೀಸ್‌ನಲ್ಲಿ ಪರಿಶೀಲನೆ ಮಾಡಿದ್ದಾರೆ.
ಶ್ವಾನದಳದ ಸಹಾಯದಿಂದ ಸುಮಾರು 3500 ಪೋಸ್ಟ್ಗಳನ್ನ ಪರಿಶೀಲನೆ ನಡೆಸಿದಾಗ ಅದರಲ್ಲಿ ಯುಸ್, ಯುಕೆ, ಬೆಲ್ಜಿಯಂ, ಥೈಲ್ಯಾಂಡ್, ನೆದರಲ್ಯಾಂಡ್ ಹಾಗೂ ಇತರೆ ದೇಶಗಳಿಂದ ಬಂದಿರುವ 606 ಪೋಸ್ಟ್ಗಳಲ್ಲಿ ಬರೋಬ್ಬರಿ 21 ಕೋಟಿ ರೂ. ಮೌಲ್ಯದ ವಿವಿಧ ಬಗೆಯ ಐಷಾರಾಮಿ ಡ್ರಗ್ಸ್ಗಳು ಬಂದಿರುವುದು ಗೊತ್ತಾಗಿದೆ.
ಸದ್ಯ ವಶಕ್ಕೆ ಪಡೆದಿರುವ ಪೋಸ್ಟ್ಗಳ ವಿಳಾಸ ಪರಿಶೀಲನೆ ನಡೆಸಿದ್ದು, ಯಾರ ಯಾರ ಹೆಸರಲ್ಲಿ ಈ ಡ್ರಗ್ಸ್ ಬಂದಿದೆ ಎನ್ನುವುದು ತನಿಖೆ ನಡೆಸಿದ್ದಾರೆ. ಒಟ್ಟನಲ್ಲಿ ಬೆಂಗಳೂರಿಗೆ ಕೇವಲ ದೇಶದ ವಿವಿಧ ರಾಜ್ಯಗಳಿಂದ ಮಾತ್ರ ಡ್ರಗ್ಸ್ ಬರುತ್ತಿಲ್ಲ, ಬದಲಿಗೆ ವಿದೇಶಗಳಿಂದಲೂ ಬರುತ್ತಿದೆ ಅನ್ನೋದು ಈ ದಾಳಿಯಿಂದ ಗೊತ್ತಾಗಿದೆ. ಅದರಿಂದ ಸಿಸಿಬಿ ಪೊಲೀಸರು ವಿದೇಶಿ ಪಾರ್ಸೆಲ್‌ಗಳ ಮೇಲೆ ನಿಗಾ ಇಟ್ಟಿದ್ದು, ಮಾದಕ ವಸ್ತುಗಳ ಜಾಲ ಮಟ್ಟ ಹಾಕಲು ಶತಪ್ರಯತ್ನ ನಡೆಸಿದ್ದಾರೆ.
ಶ್ವಾನದಳ ಬಳಸಿ ತಪಾಸಣೆ ಕೈಗೊಂಡಾಗ ಯುಎಸ್ಎ, ಯುಕೆ, ಥಾಯ್ಲೆಂಡ್, ನೆದರ್ಲ್ಯಾಂಡ್ ದೇಶಗಳಿಂದ ಬಂದಿದ್ದ 3,500 ಪಾರ್ಸೆಲ್‌ಗಳ ಪೈಕಿ 606 ಪಾರ್ಸೆಲ್‌ಗಳಲ್ಲಿ ವಿವಿಧ ಮಾದರಿಯ ಮಾದಕ ಪದಾರ್ಥಗಳು ಪತ್ತೆಯಾಗಿವೆ. ಒಟ್ಟಾರೆ, 28 ಕೆ.ಜಿ ಹೈಡ್ರೋ ಗಾಂಜಾ, 2569 ಎಲ್.ಎಸ್.ಡಿ, 1 ಕೆ.ಜಿ ಎಂಡಿಎಂಎ ಕ್ರಿಸ್ಟಲ್ಸ್, 11,908 ಎಕ್ಸ್‌ಟಸಿ ಮಾತ್ರೆಗಳು, 770 ಗ್ರಾಂ ಹೆರಾಯಿನ್, 102 ಗ್ರಾಂ ಕೊಕೇನ್, 6.280 ಕೆ.ಜಿ ಆಂಫಿಟಮೈನ್, 336 ಗ್ರಾಂ ಚರಸ್, 1 ಕೆ.ಜಿ ಗಾಂಜಾ ಎಣ್ಣೆ, 445 ಗ್ರಾಂ ಮ್ಯಾಥಕ್ಲೀನಾ, 11 ಇ-ಸಿಗರೇಟ್, 102 ಎಂ.ಎಲ್ ನಿಕೋಟಿನ್, 400 ಗ್ರಾಂ ಟ್ಯೊಬ್ಯಾಕೋ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
As Bangalore grows, so does crime. In particular, drug addiction is growing at a rapid pace. 21 Crores Rs. The CCB police investigation has revealed that luxury drugs of various value are being supplied to Bangalore.