ದಾವಣಗೆರೆ: ತೆಲುಗು ಸಿನೆಮಾ ಒಂದರ ಕತೆಯಂತೆ ಇನ್ಶೂರೆನ್ಸ್ ದುಡ್ಡಿಗಾಗಿ ಅಳಿಯನನ್ನು ಹತ್ಯೆ (d ಮಾಡಿದ ಘಟನೆ ಇಮಾಮ್ ನಗರದಲ್ಲಿ ನಡೆದಿದೆ. ಸತ್ತರೆ 40 ಲಕ್ಷ ರೂ. ಇನ್ಶೂರೆನ್ಸ್ ಸಿಗುತ್ತದೆ ಎಂದು ಕೊಲೆಗೈದು ನಂತರ ಏನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.
ಇನ್ಶೂರೆನ್ಸ್ ಹಣಕ್ಕಾಗಿ ಸೋದರ ಅಳಿಯ ಗಣೇಶ ಮತ್ತು ಸ್ನೇಹಿತರಿಂದ ದುಗ್ಗೇಶ್ (32) ಎಂಬಾತನನ್ನು ಕೊಲೆ ಮಾಡಲಾಗಿದೆ. ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಣೇಶ (24), ಅನಿಲ(18), ಶಿವಕುಮಾರ್ (25) ಮತ್ತು ಮಾರುತಿ (24) ಬಂಧಿಸಲಾಗಿದೆ.
ಮೃತ ದುರ್ಗೇಶ್ ಖಾಸಗಿ ಬಸ್ ನಿಲ್ದಾಣ ಬಳಿ ಹಣ್ಣು ಮಾರಾಟ ಮಾಡಿಕೊಂಡಿದ್ದ. ಜೊತೆಗೆ ಮದ್ಯವ್ಯಸನಿ ಕೂಡ ಆಗಿದ್ದು, ಕುಡಿದು ಕುಡಿದು ಅಶಕ್ತನಾಗಿದ್ದ. ಹೀಗಾಗಿ ಒಂದು ವರ್ಷದಲ್ಲಿ ಆತ ಸಾಯುತ್ತಾನೆ ಎಂದು ದುರ್ಗೇಶ್ ಹೆಸರಲ್ಲಿ ಗಣೇಶ್ 2 ಲಕ್ಷ ರೂ. ಇನ್ಶೂರೆನ್ಸ್ ಮಾಡಿಸಿದ್ದ. ದುಗ್ಗೇಶ್ ಸತ್ತರೆ 40 ಲಕ್ಷ ರೂ. ಇನ್ಶೂರೆನ್ಸ್ ಸಿಗಬೇಕಿತ್ತು. ಆದರೆ ಇನ್ಶೂರೆನ್ಸ್ ಮಾಡಿಸಿ ಒಂದು ವರ್ಷವಾದರೂ ದುಗ್ಗೇಶ್ ಸಾಯದಿದ್ದಾಗ ಗಣೇಶ್ ಕಂಗಾಲಾಗಿದ್ದಾನೆ.
ಜನವರಿಗೆ ಮತ್ತೆ ಇನ್ಶೂರೆನ್ಸ್ ರಿನಿವಲ್ ಮಾಡಬೇಕಿತ್ತು. ಸುಮ್ಮನೆ ಇನ್ಶೂರೆನ್ಸ್ ಕಟ್ಟಿದ ಎರಡು ಲಕ್ಷ ರೂ. ಹಾಳಾಗುತ್ತದೆ ಎಂದು ಕಂಗಾಲಾಗಿದ್ದ ಗಣೇಶ್, ಸ್ನೇಹಿತರ ಜೊತೆ ನಗರದ ಹೊರವಲಯದಲ್ಲಿ ದುಗ್ಗೇಶ್ ನನ್ನು ಟವೆಲ್ನಿಂದ ಉಸಿರು ಬಿಗಿದು ಹತ್ಯೆ ಮಾಡಿದ್ದಾರೆ. ಮುಖ ಮತ್ತು ದೇಹದ ಇತರೆಡೆ ಪಂಚ್ ಕೂಡ ಮಾಡಿದ್ದಾರೆ.
ಹತ್ಯೆ ನಂತರ ಲಿಂಗೇಶ್ವರ ದೇವಸ್ಥಾನ ಬಳಿ ಆರೋಪಿಗಳು ಎಸೆದು ಹೋಗಿದ್ದರು. ಮತ್ತೆ ಅನುಮಾನಗೊಂಡು ಅಪರಿಚಿತರಂತೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ದುಗ್ಗೇಶ್ ಮೃತದೇಹವನ್ನು ಆಸ್ಪತ್ರೆಯಿಂದ ಮನೆಗೆ ತಂದು ಹೊಸ ಕತೆ ಕಟ್ಟಿದ್ದಾರೆ. ಯಾರೋ ಹೊಡೆದು ಬಿಸಾಕಿ ಹೋಗಿದ್ದರು ಎಂದಿದ್ದಾರೆ. ಆದರೆ ಅನುಮಾನಗೊಂಡ ಆಜಾದ್ ನಗರ ಠಾಣಾ ಪೊಲೀಸರು ವಿಚಾರಣೆ ಮಾಡಿದ್ದು, ಈ ವೇಳೆ ಆರೋಪಿ ಗಣೇಶ್ ಸತ್ಯ ಬಾಯ್ಬಿಟ್ಟಿದ್ದಾರೆ. ನಂತರ ಇಬ್ಬರನ್ನು ಬಂಧಿಸಿದ್ದಾರೆ.
Davanagere: In a shocking incident, Davanagere police arrested four individuals accused of murdering a relative to claim his insurance money. The arrests were made within 24 hours of the crime by the Azad Nagar police team.
The arrested suspects have been identified as Ganesh (24) from Bamboo Bazaar, Anil (18) from Hale Chikkanahalli, Shivakumar (25), and Maruti (24) from Bharat Colony. They allegedly murdered 32-year-old Duggeshi, a resident of Imam Nagar in Davanagere, on November 4.