
ಜಪಾನ್‌ನ ಟೋಕಿಯೊದಲ್ಲಿ ನಡೆದ ಮೀನು ಹರಾಜಿನಲ್ಲಿ ಮೀನು ಒಂದರ ಬೆಲೆ ಸಂಚಲನ ಮೂಡಿಸಿದೆ. ಬರೋಬ್ಬರಿ 11 ಕೋಟಿ ರೂಪಾಯಿಗೆ ಸೇಲ್ ಆಗಿದೆ.
ಅಂದ್ಹಾಗೆ ಈ ಮೀನಿನ ಹೆಸರು ಬ್ಲೂಫಿನ್ ಟ್ಯೂನಾ (Bluefin tuna). ಜಪಾನ್ ಟೋಕಿಯೋ ಮೀನು ಮಾರುಕಟ್ಟೆಯಲ್ಲಿ ಹರಾಜು ನಡೆದಿದೆ. ಇದು ಒಟ್ಟು 276 ಕೆಜಿ ತೂಕ ಹೊಂದಿತ್ತು. ಅಲ್ಲಿನ ಪ್ರಸಿದ್ಧ Sushi Zanmai ಎಂಬ ರೆಸ್ಟೋರೆಂಟ್ ಇದನ್ನು ಖರೀದಿ ಮಾಡಿದೆ. ಇದೇ ಮಾರುಕಟ್ಟೆಯಲ್ಲಿ 2019 ರಲ್ಲಿ ಬ್ಲೂಫಿನ್ ಟ್ಯೂನಾ ಮೀನು ಹರಾಜಿಗೆ ಇಡಲಾಗಿತ್ತು. ಅದು 18 ಕೋಟಿಗೂ ಹೆಚ್ಚು ಬೆಲೆಗೆ ಮಾರಾಟವಾಗಿತ್ತು.
ಈ ಮೀನು ವೇಗವಾಗಿ ಚಲಿಸುವುದರಲ್ಲಿ ಹೆಸರುವಾಸಿ. ಇದರ ಗಾತ್ರವು ಮೋಟಾರ್ಸೈಕಲ್ನಂತೆಯೇ ಇರುತ್ತದೆ. ಇದರ ಸರಾಸರಿ ವಯಸ್ಸು 40 ವರ್ಷ. ಬ್ಲೂಫಿನ್ ಟ್ಯೂನಾದಲ್ಲಿ ಮೂರು ಜಾತಿಗಳಿವೆ. ಸಮುದ್ರದ ಆಳದಲ್ಲಿ ಇವು ಇರುತ್ತವೆ. 1999 ರ ಮಾಹಿತಿಯ ಪ್ರಕಾರ, ಮೀನು ಮಾರುಕಟ್ಟೆಯಲ್ಲಿ ಹರಾಜಿನಲ್ಲಿ ಮಾರಾಟವಾದ ಎರಡನೇ ಅತ್ಯಂತ ದುಬಾರಿ ಮೀನು ಇದಾಗಿದೆ.