Mangalore and Udupi news
ಅಪರಾಧಪ್ರಸ್ತುತರಾಜ್ಯ

ಮೃತ ತಂದೆಯ ಶವವನ್ನು ಬೈಕ್‌ನಲ್ಲೇ ಕೊಂಡೊಯ್ದ ಮಕ್ಕಳು

ಮೃತದೇಹ ಸಾಗಿಸಲು ಆಂಬುಲೆನ್ಸ್ ಇಲ್ಲದ ಕಾರಣ ಮೃತಪಟ್ಟಿರುವ ವೃದ್ಧನ ಮೃತದೇಹವನ್ನು ತಮ್ಮೂರಿಗೆ ದ್ವಿಚಕ್ರ ವಾಹನದಲ್ಲೇ ತಮ್ಮ ಮಕ್ಕಳು ತೆಗೆದುಕೊಂಡು ಹೋದ ಘಟನೆ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.

ವಯೋಸಹಜ ಕಾಯಿಲೆಯಿಂದ ದಳವಾಯಿ ಹಳ್ಳಿ ಗ್ರಾಮದ ಗುಡುಗುಲ ಹೊನ್ನೂರಪ್ಪ(80) ಎಂಬ ವೃದ್ದ ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರ ಮೃತಪಟ್ಟಿದ್ದರು.

ಮೃತಪಟ್ಟಿರುವ ಹೊನ್ನೂರಪ್ಪ ಅವರ ಮೃತದೇಹ ಸಾಗಿಸಲು ಆಂಬುಲೆನ್ಸ್ ಇಲ್ಲದ ಕಾರಣ ದ್ವಿಚಕ್ರ ವಾಹನದಲ್ಲಿಯೇ ಹೊನ್ನೂರಪ್ಪ ಅವರ ಹಿರಿಯ ಪುತ್ರ ಚಂದ್ರಣ್ಣ ಮತ್ತು ಕಿರಿಯ ಪುತ್ರ ಗೋಪಾಲಪ್ಪ ತಮ್ಮೂರಿಗೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

Related posts

Leave a Comment