Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡದೇಶ- ವಿದೇಶಪ್ರಸ್ತುತಮಂಗಳೂರು

ಫಾಸ್ಟ್‌ಟ್ಯಾಗ್‌ ಹೊಸ ನಿಯಮ ಜಾರಿ: ಕಡಿಮೆ ಬ್ಯಾಲೆನ್ಸ್ ಇದ್ರೆ ದುಪ್ಪಟ್ಟು ದಂಡ.!!

Advertisement

ಟೋಲ್ ಇರುವ ಹೆದ್ದಾರಿಯಲ್ಲಿ ನೀವು ವಾಹನ ಚಾಲನೆ ಮಾಡುವುದಾದರೆ ಇಂದಿನಿಂದ ಜಾರಿಯಾಗುವ ಫಾಸ್ಟ್‌ಟ್ಯಾಗ್‌ನ ಹೊಸ ನಿಯಮವನ್ನು ತಿಳಿದಿರಬೇಕು.

ಫಾಸ್ಟ್‌ಟ್ಯಾಗ್‌ನಲ್ಲಿನ ಸಮಸ್ಯೆಗಳಿಂದಾಗಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ದೀರ್ಘ ಸರತಿ ಸಾಲುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ತರಲಾಗಿದೆ. ಈ ಹೊಸ ನಿಯಮದ ಅಡಿಯಲ್ಲಿ ಕಡಿಮೆ ಬ್ಯಾಲೆನ್ಸ್, ವಿಳಂಬ ಪಾವತಿ, ಕೆವೈಸಿ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಕಪ್ಪುಪಟ್ಟಿ ಅಥವಾ ಬ್ಲ್ಯಾಕ್ ಲಿಸ್ಟ್​ಗೆ ಸೇರಿಸಲಾಗುತ್ತದೆ. ಜೊತೆಗೆ ಬ್ಲ್ಯಾಕ್ ಲಿಸ್ಟ್​ಗೆ ಸೇರ್ಪಡೆಯಾದ ಫಾಸ್ಟ್‌ಟ್ಯಾಗ್‌ಗಳಿಗೆ ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ.

ಇನ್ನು ಮುಂದೆ ಪ್ರಯಾಣ ನಡೆಸುವ ಒಂದು ಗಂಟೆಯ ಮೊದಲು ಫಾಸ್ಟ್‌ಟ್ಯಾಗ್‌ ಸಕ್ರಿಯವಾಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಬೇಕು. ವಾಹನವು ಟೋಲ್ ದಾಟುವ ಮೊದಲು 60 ನಿಮಿಷಗಳಿಗಿಂತ ಹೆಚ್ಚು ಕಾಲ ಮತ್ತು ಟೋಲ್ ದಾಟಿದ ನಂತರ 10 ನಿಮಿಷಗಳ ಕಾಲ ಫಾಸ್ಟ್‌ಟ್ಯಾಗ್‌ ನಿಷ್ಕ್ರಿಯವಾಗಿದ್ದರೆ ದುಪ್ಪಟ್ಟು ಹಣ ಪಾಪತಿಸಬೇಕಾಗುತ್ತದೆ.

FASTag Payment: When and How to Make? | Paytm Blog

ಫಾಸ್ಟ್‌ಟ್ಯಾಗ್‌ನ ಹೊಸ ನಿಯಮಗಳು ಈ ಕೆಳಗಿನಂತಿವೆ:

. ಫಾಸ್ಟ್‌ಟ್ಯಾಗ್‌ನಲ್ಲಿ ಹಣ ಇರಬೇಕು, ಇಲ್ಲದಿದ್ದರೆ ಟೋಲ್ ಪ್ರವೇಶಕ್ಕೆ ಒಂದು ಗಂಟೆ ಮೊದಲು ಹಣ ಜಮೆ ಮಾಡಿರಬೇಕು.

. ಟೋಲ್ ಹತ್ತಿರ ಬಂದಮೇಲೆ ರಿಚಾರ್ಜ್ ಮಾಡೋಣ ಅಂದರೆ ಸಮಸ್ಯೆಯಾಗಲಿದೆ.ಟೋಲ್ ದಾಟುವ 60 ನಿಮಿಷ ಮೊದಲು ಹಾಗೂ ದಾಟಿದ 10 ನಿಮಿಷಗಳ ಕಾಲ ಫಾಸ್ಟ್‌ಟ್ಯಾಗ್‌ ಆಕ್ಟೀವ್ ಇರಬೇಕು. ಒಂದು ವೇಳೆ ಈ ನಿಯಮ ಪಾಲನೆ ಮಾಡದಿದ್ದರೆ, ಟೋಲ್ ಸಿಸ್ಟಮ್‌ನಲ್ಲಿ ಎರರ್ ಕೋಡ್ 176 ಎಂದು ತೋರಿಸಲಾಗುತ್ತದೆ. ಈ ವೇಳೆ ಪ್ರಯಾಣಿಕರು ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ.

. ಕೆವೈಸಿ ಮಾಡಿಲ್ಲ ಎಂದಾದರೆ ನಿಮ್ಮ ಫಾಸ್ಟ್‌ಟ್ಯಾಗ್‌ ಅನ್ನು ಕಪ್ಟುಪಟ್ಟಿಗೆ ಸೇರಿಸಲಾಗುತ್ತದೆ. ಅಂತಹ ಟ್ಯಾಗ್‌ನೊಂದಿಗೆ ಬರುವ ವಾಹನಕ್ಕೆ ದುಪ್ಪಟ್ಟು ಸುಂಕ ವಿಧಿಸಲಾಗುತ್ತದೆ.

. ಒಂದು ವೇಳೆ ವಾಹನ ಟೋಲ್ ಗೇಟ್ ದಾಟಿದ 15 ನಿಮಿಷಗಳ ನಂತರ ಫಾಸ್ಟ್‌ಟ್ಯಾಗ್‌ ಖಾತೆಯಿಂದ ಹಣ ಕಡಿತವಾದರೆ ಅದಕ್ಕೆ ವಾಹನ ಸವಾರರು ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.

. ಟೋಲ್‌ಗೇಟ್‌ನಲ್ಲಿ ಹಣ ಕಡಿತ ವಿಳಂಬವಾದರೆ ಅದಕ್ಕೆ ಟೋಲ್ ಆಪರೇಟರ್ ಅನ್ನೇ ಹೊಣೆಯನ್ನಾಗಿ ಮಾಡಲಾಗುತ್ತದೆ. ತಪ್ಪು ಶುಲ್ಕ ಮತ್ತು ಹೆಚ್ಚುವರಿ ಹಣ ಕಡಿತಕ್ಕೆ ಸಂಬಂಧಿಸಿ ಬಳಕೆದಾರರು 15 ದಿನಗಳ ಬಳಿಕವಷ್ಟೇ ದೂರು ಸಲ್ಲಿಸಬಹುದು.

Related posts

Leave a Comment