ಕಾರ್ಕಳ : ಸೆ. 17ರಂದು ಕಾರ್ಕಳ ಬಂಡಿಮಠ ಶ್ರೀ ಮೂಡುಮಹಾಗಣಪತಿ ಕಲಾಮಂದಿರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಲೈವ್ ಚಾನೆಲ್ ಅಸೋಸಿಯೇಶನ್ ಉದ್ಘಾಟನೆ ನಡೆದಿದ್ದು, ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ಕಾರ್ಕಳ – ಲೈವ್ ಅಸೋಸಿಯೇಶನ್ ದ.ಕ. ಉಡುಪಿ ಅಸ್ತಿತ್ವಕ್ಕೆ ಬಂದಿದೆ. ಗೌರವಾಧ್ಯಕ್ಷರಾಗಿ ವಾಲ್ಟರ್ ನಂದಳಿಕೆ, ನೂತನ ಅಧ್ಯಕ್ಷರಾಗಿ ದಿವ್ಯವರ್ಮಾ ಮೂಡುಬಿದಿರೆ ಹಾಗೂ ಕಾರ್ಯದರ್ಶಿಯಾಗಿ ಶರತ್ ಎಂ. ಬೆಳ್ತಂಗಡಿ, ಕೋಶಾಧಿಕಾರಿಯಾಗಿ ರಾಮಚಂದ್ರ ಬರೆಪ್ಪಾಡಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸಂತೋಷ್ ಹಿರಿಯಡ್ಕ ಹಾಗೂ ಗಣೇಶ್ ಮಂಗಳೂರು, ಜೊತೆ ಕಾರ್ಯದರ್ಶಿಯಾಗಿ ಸುನಿಲ್ ಬೈಂದೂರು ಹಾಗೂ ಪ್ರದೀಪ್ ಪೂಜಾರಿ ಬಂಟ್ವಾಳ, ಕ್ರೀಡಾ ಕಾರ್ಯದರ್ಶಿಯಾಗಿ ರಾಘವೇಂದ್ರ ಮೂಡುಬಿದಿರೆ, ಗೌರವ ಸಲಹೆಗಾರರಾಗಿ ಪದ್ಮಪ್ರಸಾದ್ ಜೈನ್ ಅವರನ್ನು ಆಯ್ಕೆ ಮಾಡಲಾಯಿತು.
ಲೈವ್ ಚಾನೆಲ್ ನಡೆಸುವವರು ಸಂಘಟಿತರಾದಲ್ಲಿ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಈ ನಿಟ್ಟಿನಲ್ಲಿ ಲೈವ್ ಚಾನೆಲ್ ಅಸೋಸಿಯೇಶನ್ ಸ್ಥಾಪನೆ ಉತ್ತಮ ಬೆಳವಣಿಗೆ ಎಂದು ದಾಯ್ದಿವರ್ಲ್ಡ್ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ವಾಲ್ವರ್ ನಂದಳಿಕೆ ಅಭಿಪ್ರಾಯಪಟ್ಟರು.
ಲೈವ್ ಚಾನೆಲ್ ಸಂಸ್ಥೆ ಮಾಲಕರು ಪ್ರಸ್ತುತ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದಾರೆ. ಪರಿಕರ ಖರೀದಿ ಬಂಡವಾಳ, ಸಿಬ್ಬಂದಿ ಖರ್ಚು, ಕಚೇರಿ ನಿರ್ವಹಣೆ, ಪರಿಕರ ಸರ್ವಿಸ್ ಹೀಗೆ ಲೈವ್ ಗೆ ಸಂಬಂಧಿಸಿದ ಎಲ್ಲ ವೆಚ್ಚವನ್ನು ಲೆಕ್ಕ ಹಾಕಿ ಲೈವ್‌ಗೆ ಒಂದು ದರ ನಿಗದಿಗೊಳಿಸಬೇಕಿದೆ ಎಂದರು.
ವೇದಿಕೆಯಲ್ಲಿ ನ್ಯೂಸ್ ಕಾರ್ಕಳ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಬರೆಪ್ಪಾಡಿ, ವೈಭವ ಚಾನೆಲ್‌ನ ದಿವ್ಯವರ್ಮಾ ಬಲ್ಲಾಳ್, ಸ್ನೇಹ ಡಿಜಿಟಲ್ ನ ಸಂತೋಷ್ ಹಿರಿಯಡ್ಕ ಉಪಸ್ಥಿತರಿದ್ದರು. ಸಭೆಯಲ್ಲಿ ಮಂಗಳೂರು, ಉಡುಪಿ, ಕುಂದಾಪುರ, ಬೈಂದೂರು, ಬ್ರಹ್ಮಾವರ, ಕಾಪು, ಕಾರ್ಕಳ, ಹೆಬ್ರಿ, ಮೂಡುಬಿದಿರೆ, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಕಡಬ, ಸುಳ್ಯದಿಂದ ಲೈವ್ ಚಾನೆಲ್ ಸಂಸ್ಥೆ ಹೊಂದಿರುವ ಮಾಲಕರು ಮತ್ತು ವ್ಯವಸ್ಥಾಪಕರು ಉಪಸ್ಥಿತರಿದ್ದರು.