ಭಾರತೀಯ ಕೋಸ್ಟ್ ಗಾರ್ಡ್ ಅಂಡಮಾನ್ ಜಲಪ್ರದೇಶದಲ್ಲಿ ಮೀನುಗಾರಿಕಾ ದೋಣಿಯಿಂದ ಸುಮಾರು 5500 ಕೆಜಿ ಅಂದರೆ ಸುಮಾರು 5 ಟನ್ ತೂಕದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದರ ಬೆಲೆ 25000 ಕೋಟಿ ರೂ. ಈ ಸರಕು ಎಲ್ಲಿಂದ ಬರುತ್ತಿತ್ತು ಮತ್ತು ಯಾರಿಗೆ ಮತ್ತು ಎಲ್ಲಿಗೆ ಸರಬರಾಜು ಮಾಡಬೇಕಿತ್ತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.
ವಶಪಡಿಸಿಕೊಂಡ ದೊಡ್ಡ ಪ್ರಮಾಣದ ಮಾದಕ ದ್ರವ್ಯವು ಸರ್ಕಾರದ ಬದ್ಧತೆ ಮತ್ತು ಅದರ ಏಜೆನ್ಸಿಗಳ ನಡುವಿನ ಸಮನ್ವಯಕ್ಕೆ ಉತ್ತಮ ಉದಾಹರಣೆಯಾಗಿದೆ. ಎರಡು ಕಿಲೋ ತೂಕದ ಡ್ರಗ್ಸ್‌ನ ಮೂರು ಸಾವಿರ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದು, ಕೋಸ್ಟ್‌ಗಾರ್ಡ್‌ನ ಡೋರ್ನಿಯರ್ ವಿಮಾನವು ಅನುಮಾನಾಸ್ಪದ ದೋಣಿಯನ್ನು ಗುರುತಿಸಿತು ಮತ್ತು ತಕ್ಷಣ ಹತ್ತಿರದ ಕಮಾಂಡ್‌ಗೆ ತಿಳಿಸಿತು.
ಅದರ ಹಿನ್ನೆಲೆಯಲ್ಲಿ ಗಸ್ತು ಹಡಗುಗಳು ತಕ್ಷಣವೇ ಧಾವಿಸಿವೆ. ಹಡಗನ್ನು ತಕ್ಷಣವೇ ಹತ್ತಿರದ ದ್ವೀಪಕ್ಕೆ ಎಳೆಯಲಾಯಿತು. ಇದರಲ್ಲಿ ಆರು ಮಂದಿ ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡ ಡ್ರಗ್ಸ್ ಮೆಥಾಂಫೆಟಮೈನ್ ಎಂದು ನಂಬಲಾಗಿದೆ. ಜಂಟಿ ವಿಚಾರಣೆಗಾಗಿ ಅಂಡಮಾನ್ ನಿಕೋಬಾರ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.