Mangalore and Udupi news
ಅಪರಾಧಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮುಲ್ಕಿ: ಕಾರಿನಲ್ಲಿ ಮಾದಕ ವಸ್ತುಗಳ ಸಾಗಾಟ – ಮೊಹಮ್ಮದ್ ಸಲೀಂ ಅರೆಸ್ಟ್.!!

ಮುಲ್ಕಿ: ಬಪ್ಪನಾಡು ಚೆಕ್ ಪೋಸ್ಟ್ ಬಳಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿದ್ದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿಯನ್ನು ಉಡುಪಿ ಜಿಲ್ಲೆಯ ಮಲ್ಪೆ ನಿವಾಸಿ ಮೊಹಮ್ಮದ್ ಸಲೀಂ(38) ಎಂದು ಗುರುತಿಸಲಾಗಿದೆ.

ಈತ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ರಿಜ್ ಕಾರು ( ಕೆಎ 19 ಎಂಪಿ 662)ನಲ್ಲಿ ಮಾದಕ ವಸ್ತುಗಳನ್ನು ಕಾರಿನ ಡ್ಯಾಶ್ ಬಾಕ್ಸ್ ನಲ್ಲಿ ಇರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ಸಾಗಿಸುತ್ತಿದ್ದ.

ಚೆಕ್ ಪೋಸ್ಟ್ ಬಳಿ ಪೊಲೀಸ್ ಇನ್ಸೆಕ್ಟರ್ ಅನಿತಾ ಹಾಗೂ ಪೋಲಿಸ್ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾಗ ಆರೋಪಿ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಅಲರ್ಟ್ ಆದ ಪೊಲೀಸರು ಆರೋಪಿಯನ್ನು ಕಾರು ಸಮೇತ ಬಂಧಿಸಿ ಕಾರಿನಲ್ಲಿದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿ ಎಂಡಿಎoಎ, ಹೈಡೋ ವೀಡ್ ಗಾಂಜಾ, ಸಹಿತ ಅನೇಕ ವಸ್ತುಗಳನ್ನು ಪತ್ತೆಯಾಗಿವೆ.

Advertisement

Related posts

Leave a Comment