Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ಪ್ರಸ್ತುತರಾಜ್ಯ

ಗಾಂಜಾ ಸಾಗಿಸುತ್ತಿದ್ದ ತಂದೆ, ಮಗಳು, ಮೊಮ್ಮಗ ಸೇರಿ ಐವರ ಬಂಧನ

ತಂದೆ, ಮಗಳು, ಮೊಮ್ಮಗ ಎಲ್ಲರೂ ಮಾದಕವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಚಿಕ್ಕಬಳ್ಳಾಪುರ ಸೈಬರ್ ಠಾಣೆ ಪೊಲೀಸರು ಬಂಧಿಸಿರ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗರಿಗೆರೆಡ್ಡಿಪಾಳ್ಯಾ ನಿವಾಸಿಗಳಾಗಿರುವ ಮಾರಪ್ಪ, ಮಾರಪ್ಪನ ಮಗಳು ದೇವಮ್ಮ, ದೇವಮ್ಮನ ಮಗ ಆಂಜಿಯನ್ನು ಸದ್ಯ ಪೊಲೀಸರು ಬಂಧಿಸದ್ದಾರೆ.

ರಾತ್ರೋರಾತ್ರಿ ಶ್ರೀಮಂತರಾಗುವ ಕನಸ್ಸು ಕಂಡು ಅಕ್ರಮವಾಗಿ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಮಹಿಂದ್ರಾ ಎಕ್ಸ್ ಯುವಿ 500 ಕಾರಿನಲ್ಲಿ 17 ಲಕ್ಷದ 50 ಸಾವಿರ ರೂ. ಮೌಲ್ಯದ 35 ಕೆಜಿ ಗಾಂಜಾವನ್ನ ಸಾಗಾಟ ಮಾಡುತ್ತಿದ್ದಾಗ ಚಿಕ್ಕಬಳ್ಳಾಪುರ ಸೈಬರ್ ಠಾಣೆ ಪೊಲೀಸರ ಅತಿಥಿಗಳಾಗಿದ್ದಾರೆ.

ಚಿಕ್ಕಬಳ್ಳಾಪುರ: ಗಾಂಜಾ ಸಾಗಿಸುತ್ತಿದ್ದ ತಂದೆ, ಮಗಳು, ಮೊಮ್ಮಗ ಸೇರಿ ಐವರ ಬಂಧನ

ಇನ್ನೂ ಬಂಧಿತ ಮಾರಪ್ಪ, ದೇವಮ್ಮ, ಆಂಜಿ ಜೊತೆ ಅವರ ಕಾರಿನಲ್ಲಿದ್ದ ಆದಿನಾರಾಯಣ, ವೆಂಕಟರಮಣನನ್ನು ಬಂಧಿಸಲಾಗಿದೆ. ತಂದೆ, ಮಗಳು, ಮೊಮ್ಮಗನ ಮೇಲೆ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಸೇರಿದಂತೆ ತುಮಕೂರು ಜಿಲ್ಲೆಗಳಲ್ಲಿ ಗಾಂಜಾ ಮಾರಾಟ, ಸಾಗಟದ ಕೇಸ್​ಗಳಿವೆ. ಆದರೂ ಬುದ್ದಿ ಕಲಿಯದ ಇವರು ಜೈಲಿಗೆ ಹೋಗುವುದು ಮತ್ತೆ ಜಾಮೀನು ಮೇಲೆ ಆಚೆ ಬರುವುದು, ಗಾಂಜಾ ಮಾರಾಟ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರಂತೆ.

Advertisement

Related posts

Leave a Comment