Mangalore and Udupi news
ದೇಶ- ವಿದೇಶಪ್ರಸ್ತುತರಾಜಕೀಯರಾಜ್ಯ

ದೇಸಿ ಹಸುವನ್ನು ರಾಜ್ಯಮಾತಾ ಎಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರ

ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರ ಚುನಾವಣೆಯ ಸಮೀಪವಿರುವಾಗಲೇ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ದೇಸಿ ಗೋವುಗಳಿಗೆ ರಾಜ್ಯಮಾತಾ ಗೋಮಾತ ಎಂಬ ಸ್ಥಾನಮಾನವನ್ನು ನೀಡಿದೆ.

ದೇಸಿ ಹಸುಗಳಿಗೆ ರಾಜಮಾತಾ ಗೋಮಾತಾ ಎಂಬ ಸ್ಥಾನಮಾನ ನೀಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ಶಿಂಧೆ ಸರ್ಕಾರ ಹೇಳಿದೆ.

ಭಾರತೀಯ ದೇಸಿ ಹಸುಗಳು ವೇದಗಳ ಕಾಲದಿಂದಲೂ ಪೂಜ್ಯನೀಯ ಸ್ಥಾನದಲ್ಲಿದ್ದನ್ನು ಗಮನದಲ್ಲಿಟ್ಟುಕೊಂಡು. ಅವು ನೀಡುವ ಹಾಲು ನಮ್ಮ ಬದುಕಿನ ಆಹಾರ ಪದ್ಧತಿಯೊಳಗೆ ಹಾಸುಹೊಕ್ಕಾಗಿದ್ದು. ಗೋಮೂತ್ರದಲ್ಲಿ ಔಷಧಿಗಳ ಗುಣವಿದೆ. ಸಗಣಿಯಿಂದ ಸಾವಯವ ಕೃಷಿಗೆ ಸಹಕಾರಿಗಿರುವುದು ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡಿದೆ.

ಸಚಿವ ಸಂಪುಟದ ತೀರ್ಮಾನವನ್ನು ಅಂಗೀಕರಿಸಿ ಸರ್ಕಾರದ ನಿರ್ಣಯಕ್ಕೆ ರಾಜ್ಯಪಾಲರಾದ ಸಿ.ಪಿ.ರಾಧಾಕೃಷ್ಣನವರು ಅಂಗೀಕರಸಿ ಸಹಿ ಹಾಕಿದ ಮೇಲೆ ಸರ್ಕಾರದ ಈ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ದೇಶಿ ಹಸುಗಳನ್ನು ಸಾಕಲು ಸಬ್ಸಿಡಿ

ದೇಶಿ ಹಸುಗಳನ್ನು ಸಾಕಲು ಸಬ್ಸಿಡಿ ಯೋಜನೆ ಜಾರಿಗೊಳಿಸುವ ಪ್ರಸ್ತಾವನೆಗೂ ಸಂಪುಟ ಒಪ್ಪಿಗೆ ನೀಡಿದೆ. ಯೋಜನೆಯಡಿ, ಗೋಶಾಲೆಗಳಿಗೆ ಪ್ರತಿ ಹಸುವಿಗೆ ದಿನಕ್ಕೆ ₹ 50 ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಈ ಯೋಜನೆಯು ಸ್ಥಳೀಯ ತಳಿಗಳ ಸಂರಕ್ಷಣೆಯನ್ನು ಖಚಿತಪಡಿಸುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹೇಳಿದರು: “ಇದು ಗೋಶಾಲೆಗಳಿಗೆ ಹಸುಗಳಿಗೆ ಮೇವು ಒದಗಿಸಲು ಸಹಾಯ ಮಾಡುತ್ತದೆ. ಇದು ಸ್ಥಳೀಯ ತಳಿಗಳನ್ನು ಸಂರಕ್ಷಿಸಲು ಅವರಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.

Maharashtra declares desi cow as ‘Rajmata-Gaumata’

The Maharashtra government Monday designated the indigenous cow as ‘Rajmata-Gaumata’, citing the importance of cows in Indian culture, agriculture, and healthcare.

The declaration was made through a government resolution (GR) which said, “Since Vedic times, the significance of cows in human life is religious, scientific, and economical and hence it is called as Kamdhenu.”

Related posts

Leave a Comment