ರಾಷ್ಟ್ರರಾಜಧಾನಿಯಲ್ಲಿ ಮತ್ತೆ ಲವ್ ಜಿಹಾದ್ ಸದ್ದು ಮಾಡಿದೆ. ಹಿಂದೂ ಎಂದು ಪರಿಚಯಿಸಿಕೊಂಡ ಮುಸ್ಲಿಂ ಯುವಕ ಆಕೆಯನ್ನು ಗರ್ಭಾವತಿಯನ್ನಾಗಿಸಿ ಭೀಕರವಾಗಿ ಕೊಲೆಗೈದ ಘಟನೆ ವರದಿಯಾಗಿದೆ.
ಮುಸ್ಲಿಂ ಯುವಕ ಆತನ ಗೆಳೆಯರೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದು ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಸೋನಿ ಎಂಬಾಕೆ ಲವ್ ಜಿಹಾದ್‌ಗೆ ಬಲಿಯಾದ ಯುವತಿ. ಸೋನಿ ದೆಹಲಿಯ ನಂಗ್ಲೋಯ್ ನಿವಾಸಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದಳು.
instagram ನಲ್ಲಿ ಪರಿಚಯವಾಗಿದ್ದ ಯುವಕ ಸೋನಿಯನ್ನು ಪ್ರೀತಿಸುವುದಾಗಿ ನಂಬಿಸಿ ಕೊಲೆಗೈದಿದ್ದಾನೆ. ಸಲೀಮ್ ಎಂಬಾತ ತಾನೊಬ್ಬ ಹಿಂದೂ, ನನ್ನ ಹೆಸರು ಸಂಜು ಎಂದು ಪರಿಚಯಿಸಿಕೊಂಡು ಸೋನಿಯ ಹಿಂದೆ ಬಿದ್ದಿದ್ದ. ಸೋನಿ ಹಾಗೂ ಸಲೀಂ ಪ್ರೀತಿಸುತ್ತಿದ್ದರು. ಸೋನಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಈ ವೇಳೆ ನನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ.
ಸೋನಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಸಲೀಂನನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದಳು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಸಲೀಂಗೆ ಮದುವೆ ಇಷ್ಟವಿಲ್ಲದೆ, ಗರ್ಭಪಾತ ಮಾಡಿಸಿಕೊಳ್ಳು ಎಂದು ಒತ್ತಾಯಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು.
ಇಬ್ಬರ ಜಗಳದ ನಂತರ, ಸೋನಿ ತನ್ನ ಮನೆಯಿಂದ ವೈಯಕ್ತಿಕ ವಸ್ತುಗಳನ್ನು ತೆಗೆದುಕೊಂಡು ಸಲೀಂನನ್ನು ಭೇಟಿಯಾಗಿದ್ದಾಳೆ. ನಂತರ ತನ್ನ ಗೆಳೆಯರೊಂದಿಗೆ ಸಲೀಂ ಆಕೆಯನ್ನು ಹರಿಯಾಣದ ರೋಹ್ಟಕ್‌ಗೆ ಕರೆದೊಯ್ದಿದ್ದಾನೆ.
ಮೂಲಗಳ ಪ್ರಕಾರ, ರೋಹ್ಟಕ್ ತಲುಪಿದ ನಂತರ, ಸಲೀಂ ಮತ್ತು ಅವನ ಸಹಚರರು ಯುವತಿಯನ್ನು ಕೊಂದು ಶವವನ್ನು ನಾಲ್ಕು ಅಡಿ ಆಳದ ಗುಂಡಿಯಲ್ಲಿ ಹೂತು ಹಾಕಿ ವಾಪಸ್ಸು ಆಗಿದ್ದಾರೆ. ಇನ್ನು ಮನೆಯಿಂದ ನಾಪತ್ತೆಯಾಗಿದ್ದ ಬಗ್ಗೆ ದೂರು ಬಂದ ಹಿನ್ನಲೆ ದೆಹಲಿ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಪೊಲೀಸರ ತನಿಖೆ ವೇಳೆ ಅಸಲಿಯತ್ತು ಬಯಲಾಗಿದೆ. ಸಲೀಂ ಹಾಗೂ ಆತನ ಗೆಳೆಯರು ಕೊಲೆ ಮಾಡಿದ್ದ ತಿಳಿದುಬಂದಿದೆ. ಸಲೀಂ ಮತ್ತು ಆತನ ಸ್ನೇಹಿತನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಎಸ್ಕೇಪ್ ಆದ ಆತನನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Delhi: Pregnant Teen Killed, Buried Over Marriage Pressure; Boyfriend And Accomplice Held
A 19-year-old girl from Delhi’s Nangloi, was allegedly murdered by her boyfriend Sanju alias Saleem, and two accomplices due to a conflict over her pregnancy and desire to marry. The teenager was seven months pregnant and insisted on marrying Saleem, who wanted her to terminate the pregnancy, leading to frequent arguments.
The victim, an active social media user with over 6,000 followers, often shared posts featuring Saleem. Her family grew suspicious when she referred to him as a ‘ghost’ in response to their inquiries about her new friend.
The tragic incident occurred on October 21, during Karwa Chauth, when the victim was fasting, she had a heated argument with Saleem. After the confrontation, the victim took personal belongings from her home and met Saleem. Along with his two friends, he rented a car and drove her to Rohtak in Haryana.