Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತ

ಮಂಗಳೂರು: ನದಿಗೆ ಹಾರಿ ಆತ್ಮಹತ್ಯೆ – ಮೃತದೇಹ ಪತ್ತೆ.!!

ಮಂಗಳೂರು : ಗುರುಪುರ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾದ ಬಡಗ ಎಡಪದವು ಚಟ್ಟೆಪಾದೆಯ ನಿವಾಸಿ ಕಮಲಾ ಮೂಲ್ಯ ಎಂಬವರ ಮಗ ರಮೇಶ್ ಕುಲಾಲ್ (48) ಅವರ ಮೃತದೇಹ ಸೋಮವಾರ ನದಿಯಲ್ಲಿ ಪತ್ತೆಯಾಗಿದೆ.

ರಮೇಶ್ ಕುಲಾಲ್ ಅವರು ಕೌಟುಂಬಿಕ ಕಲಹ ಮತ್ತು ಜಾಗದ ವಿಚಾರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಅಣ್ಣ ಪದ್ಮನಾಭ ಎಂಬವರು ಬಜ್ಪೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಜೆಸಿಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ರಮೇಶ್ ಕುಲಾಲ್ ಅವರು ಶನಿವಾರ ರಾತ್ರಿ 8ಗಂಟೆ ಸುಮಾರಿಗೆ ಗುರುಪುರ ಸೇತುವೆ ಬಳಿಗೆ ಬಸ್‌ ನಲ್ಲಿ ಬಂದು ಇಳಿದಿದಿದ್ದು, ಬಳಿಕ ನಾಪತ್ತೆಯಾ ಗಿದ್ದರು.

ಇವರ ಮೊಬೈಲ್‌ ಮತ್ತು ಚಪ್ಪಲಿ ಸೇತುವೆಯ ಮೇಲೆ ಪತ್ತೆಯಾಗಿದ್ದು, ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಡಿಆರ್‌ಎಫ್‌ ಮತ್ತು ಪೊಲೀಸರ ತಂಡ ಗುರುಪುರ ಸೇತುವೆಯ ಫಲ್ಗುಣಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದರು.

ಸೋಮವಾರ ಬೆಳಗ್ಗೆ ಮೃತದೇಹ ನದಿಯಲ್ಲೇ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಬಳಿಕ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

The dead body of Ramesh Kulal (48), son of Kamala Mulya, a resident of Badaga Edapadavu, who is said to have committed suicide by jumping into the river, was found in the river on Monday.

Related posts

Leave a Comment