ಚಿಕ್ಕಮಗಳೂರು: ಕಾರು ಹರಿದು ಗಂಭೀರವಾಗಿ ಗಾಯಗೊಂಡಿದ್ದ ಎರಡು ನಾಗರಹಾವುಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡಿದ ಅಪರೂಪದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ.
ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾವಿನ ಮೇಲೆ ಕಾರು ಹರಿದಿದೆ. ಪರಿಣಾಮ ಹಾವು ಹಾಗೂ ಅದರ ಮರಿ ಗಂಭೀರವಾಗಿ ಗಾಯಗೊಂಡಿದ್ದವು. ಎರಡೂ ಹಾವನ್ನು ಉರಗ ತಜ್ಞ ಆರೀಫ್ ಪಶು ಆಸ್ಪತ್ರೆಗೆ ತಂದಿದ್ದರು. ಹಾವಿಗೆ ಪಶುವೈದ್ಯಾಧಿಕಾರಿ ಚೈತ್ರ ಅವರು ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ವೈದ್ಯರು ನೀಡಿದ ಔಷಧಿಯನ್ನು ಆರೀಫ್ ಹಚ್ಚಿದ್ದಾರೆ. ಬಳಿಕ ಹಾವುಗಳು ಚೇತರಿಸಿಕೊಂಡಿದ್ದು, ಅವನ್ನು ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.