
ಪಾಲಿಕೆ ಆಯುಕ್ತರ ಸಹಿಯನ್ನೇ ನಕಲು ಮಾಡಿ ಕೋಟ್ಯಾಂತರ ಹಣ ಕೊಳ್ಳೆಹೊಡೆಯಲು ಸ್ಕೆಚ್ ಹಾಕಿದ್ದಲ್ಲದೆ, ಬರೋಬ್ಬರಿ ಮೂವತ್ತೈದು ಲಕ್ಷ ಹಣ ಡ್ರಾ ಮಾಡಿಕೊಂಡ ಘಟನೆ ಕಲಬುರಗಿಯಿಂದ ವರದಿಯಾಗಿದೆ.
ಕಲಬುರಗಿ ಪಾಲಿಕೆ ಆಯುಕ್ತರ ಸಹಿ ನಕಲು ಮಾಡಿ ಹಣ ಡ್ರಾ ಪ್ರಕರಣದಲ್ಲಿ ಪಾಲಿಕೆ ಆಯುಕ್ತರ ಪಿಎ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಿಎ ಮೊಹಮ್ಮದ್ ನಯಿಮೋದ್ದಿನ್, ವಾಜೀದ್ ಇಮ್ರಾನ್, ಮಿರ್ಜಾ ಬೇಗ್, ನಸೀರ್ ಅಹ್ಮದ್ ಮತ್ತು ಮೊಹಮ್ಮದ್ ರೆಹಮಾನ್ ಬಂಧಿತರು. ಬಂಧಿತರಿಂದ 30 ಲಕ್ಷ ರೂ. ಹಣ ಜಪ್ತಿ ಮಾಡಿಕೊಂಡಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆಕ್ ಬುಕ್‌ನಲ್ಲಿ ಆಯುಕ್ತರ ನಕಲಿ ಸಹಿ ಮಾಡಿ ಬ್ಯಾಂಕ್‌ಗೆ ವಂಚಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಮೊದಲಿಗೆ ಮೂರು ಚೆಕ್ ತಯಾರು ಮಾಡಿದ್ದಾರೆ. 1 ಕೋಟಿ 32 ಲಕ್ಷ ರೂ. ಹಣ ವಿತ್ ಡ್ರಾಗೆ 3 ಚೆಕ್‌ಗಳನ್ನು ನೌಕರರು ಬ್ಯಾಂಕ್‌ಗೆ ಕಳಿಸಿದ್ದಾರೆ. ಒಂದು ಚೆಕ್ ನೀಡಿ 35,56,640 ರೂ. ಹಣ ಡ್ರಾ ಮಾಡಿಕೊಂಡಿದ್ದರು. ಬಂದಿದ್ದೇ ಲಾಟರಿ ಅಂದುಕೊAಡು ಬಳಿಕ ಮತ್ತೆರಡು ಚೆಕ್‌ಗಳನ್ನು ಖದೀಮರು ಡ್ರಾಗೆ ಕಳುಹಿಸಿದ್ದರು.
ಬ್ಯಾಂಕಿನಲ್ಲಿ ಅನುಮಾನ ಬಂದು ಆಯುಕ್ತರ ಕಚೇರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದರು. ಹೀಗಾಗಿ ತಕ್ಷಣವೇ ಎಚ್ಚೆತ್ತುಕೊಂಡು ದೂರು ದಾಖಲಿಸಿದ್ದ ಪಾಲಿಕೆ, ಇದೀಗ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.