ಆ.23, 2023 ಭಾರತದ ಪಾಲಿನ ಸುವರ್ಣ ದಿನ. ಇಸ್ರೋವಿನ ಚಂದ್ರಯಾನ 3 ನೌಕೆ ದಕ್ಷಿಣ ಧ್ರುವ ಪ್ರದೇಶ ಇಳಿದು ವಿಶ್ವವೇ ಬೆರಗಾಗುವಂತ ಸಾಧನೆ ಮಾಡಿತ್ತು. ಇದೀಗ ಇಸ್ರೋ ಚಂದ್ರಯಾನ ಬಗೆಗಿನ ಮತ್ತೊಂದು ಅಚ್ಚರಿಯ ಸುದ್ದಿ ನೀಡಿದೆ. ಇಸ್ರೋದ ನೌಕೆ ಚಂದ್ರನ ಅತ್ಯಂತ ಹಳೆಯ ಕುಳಿಯಲ್ಲಿ ಇಳಿದಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಚಂದ್ರಯಾನ -3 ನೌಕೆಯ ಭಾಗವಾಗಿದ್ದ ಪ್ರಜ್ಞಾನ್ ರೋವರ್ ಕಳುಹಿಸಿದ್ದ ದತ್ತಾಂಶಗಳ ಅನ್ವಯ, ನೌಕೆ ಇಳಿದ ಜಾಗವನ್ನು ನೆಕ್ಟೇರಿಯನ್ ಪೀರಿಯಡ್ ಎಂದು ಗುರುತಿಸಬಹುದು. ಅಂದರೆ 385 ಕೋಟಿ ವರ್ಷಗಳ ಹಿಂದೆ ಈ ಕುಳಿ ನಿರ್ಮಾಣ ಆಗಿರಬಹುದು. ಇದು ಚಂದ್ರನ ಇತಿಹಾಸದಲ್ಲೇ ಅತ್ಯಂತ ಹಳೆಯ ಕುಳಿಗಳ ಪೈಕಿ ಒಂದು ಎಂದು ಅಹಮದಾಬಾದ್‌ನ ಇಸ್ರೋದ ವಿಜ್ಞಾನಿಗಳ ತಂಡ ಅಂದಾಜಿಸಿದೆ. ಕ್ಷುದ್ರಗಳು ಅಪ್ಪಳಿಸಿದ ಕಾರಣ 300 ಕಿ.ಮೀ ಸುತ್ತಳೆಯ ಕುಳಿ ಸೃಷ್ಟಿಯಾಗಿತ್ತು ಎಂದು ವಿಜ್ಞಾನಿಗಳ ತಂಡ ಹೇಳಿದೆ.
ಚಂದ್ರನ ಮೇಲೆ ಮಾನವರನ್ನು ಇಳಿಸಿ, ಅಧ್ಯಯನ ನಡೆಸಿದ ಬಳಿಕ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಚಂದ್ರಯಾನ-4 ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಎಲ್ಲವೂ ಅಂದುಕೊಂಡರೆ 2040ಕ್ಕೆ ಈ ಸಾಹಸ ನಡೆಯಲಿದೆ. ಚಂದ್ರನ ಮೇಲೆ ಮಾನವರನ್ನು ಇಳಿಸಿ, ಅವರನ್ನು ವಾಪಸ್ ಕರೆತರುವ ತಂತ್ರಜ್ಞಾನವನ್ನು ಇಸ್ರೋ ಅನಾವರಣಗೊಳಿಸಬೇಕಿದೆ. ಈ ಯೋಜನೆಗೆ 2104.06 ಕೋಟಿ ರು. ವೆಚ್ಚವಾಗಲಿದೆ.
2008ರಲ್ಲಿ ಇಸ್ರೋ ಚಂದ್ರನ ಅಧ್ಯಯನಕ್ಕೆ ನೌಕೆಯನ್ನು ಕಳುಹಿಸಿತ್ತು. ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಅಧ್ಯಯನ ನಡೆಸುವ ಆ ನೌಕೆಗೆ ‘ಚಂದ್ರಯಾನ-1’ ಎಂಬ ಹೆಸರಿಡಲಾಗಿತ್ತು. ಚಂದ್ರನ ಮೇಲೆ ಲ್ಯಾಂಡರ್ ಹಾಗೂ ರೋವರ್ ಇಳಿಸಲು ಚಂದ್ರಯಾನ-2 ಯೋಜನೆಯನ್ನು ಇಸ್ರೋ 2019ರಲ್ಲಿ ಹಮ್ಮಿಕೊಂಡಿತ್ತು. ಸಾಫ್ಟ್‌ವೇರ್ ದೋಷದಿಂದಾಗಿ ಅದು ವಿಫಲವಾಗಿತ್ತು. 2023ರಲ್ಲಿ ಚಂದ್ರಯಾನ-3 ಕೈಗೆತ್ತಿಕೊಂಡು ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡರ್ ಹಾಗೂ ರೋವರ್ ಅನ್ನು ಯಶಸ್ವಿಯಾಗಿ ಇಳಿಸಿತ್ತು.
Chandrayaan-3 lander landed on oldest crater
The Chandrayaan-3 mission with the Vikram-lander and the Pragyan rover landed on the high latitude highland region near the south pole of the Moon. The landing site is 350km from the South Pole- Aitken (SPA) basin rim, an ancient and the largest impact basin in the solar system.