Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದೇಶ- ವಿದೇಶಪ್ರಸ್ತುತರಾಜ್ಯ

ಮೋರಿಯಲ್ಲಿ ಬಂದ ಕಂತೆ ಕಂತೆ ನೋಟುಗಳು.!! ಜೇಬಿಗಿಳಿಸಿಕೊಂಡ ಜನ

ಮಳೆಯ ನೀರು ಸಾಗಿ ಹೋಗುವ ಮೋರಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾದ ಘಟನೆ ವರದಿಯಾಗಿದೆ‌. ನೂರಾರು ಮಂದಿಗೆ ನೋಡ ನೋಡುತ್ತಲೇ ₹500 ನೋಟುಗಳು ಸಿಕ್ಕಿವೆ. ಪ್ರತಿಯೊಬ್ಬರಿಗೂ 1 ಸಾವಿರ, 5 ಸಾವಿರ, 10, 50 ಸಾವಿರದವರೆಗೂ ನೋಟುಗಳು ಸಿಕ್ಕಿವೆ. ಎಲ್ಲರ ಮುಖದಲ್ಲೂ ಖುಷಿ, ಇರುಸು ಮುರುಸು ಅನಿಸಿದ್ದು ಕೈಗಂಟ್ಟಿದ್ದ ಕೆಸರು ಮಾತ್ರ.

Currncy Notes in Drain: మురికి కాలువలో రూ.500 నోట్లు.. ఎగబడిన జనం - NTV  Telugu

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟಪಡಿ ಬಳಿಯ ಮೋರಿಯಲ್ಲಿ ₹500 ನೋಟುಗಳು ತೇಲಾಡುತ್ತಿದ್ದವು. ಮೊದಲಿಗೆ ನಕಲಿ ನೋಟು ಅಂದುಕೊಂಡಿದ್ದರು. ತೀರಾ ಒಂದು ನೋಟನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಮೇಲೆಯೇ ಇದು ಅಸಲಿ ನೋಟು ಅನ್ನುವುದು ಗೊತ್ತಾಗಿದೆ. ಸಿಕ್ಕಿದ್ದೇ ಅದೃಷ್ಟ ಅಂತ ಹಣವನ್ನು ಜೇಬಿಗೆ ಹಾಕಿಕೊಂಡಿದ್ದಾರೆ.

ಈ ಕ್ಷಣಕ್ಕೂ ಅಲ್ಲಿ ಹಣ ತೆಗೆದುಕೊಂಡವರು ಅಚ್ಚರಿಗೊಂಡಿದ್ದಾರೆ. ಇಷ್ಟೊಂದು ನೋಟುಗಳನ್ನು ನೀರಿಗೆ ಎಸೆದಿದ್ದು ಯಾರು? ಅನ್ನೋ ಯೋಚನೆ ಮಾಡುತ್ತಿದ್ದಾರೆ. ಸುಮಾರು 2 ರಿಂದ 2.5 ಲಕ್ಷದಷ್ಟು ₹500ರ ನೋಟುಗಳು ಮೋರಿಯಲ್ಲಿ ಸಿಕ್ಕಿವೆ. ಕೆಲವರಂತೂ ತಮಗೆ ಸಿಕ್ಕ ಹಣ ಎಷ್ಟು ಅನ್ನುವುದನ್ನೂ ಹೇಳುತ್ತಿಲ್ಲ. ಒಂದು ವೇಳೆ ಪೊಲೀಸರು ಬಂದು ವಾಪಾಸ್ ಪಡೆಯಬಹುದು ಅನ್ನುವ ಭಯದಲ್ಲಿದ್ದಾರೆ. ಹಾಗಾಗಿಯೇ ಇಲ್ಲಿ ಅಚಾನಕ್ ಆಗಿ ಸಿಕ್ಕಿರುವ ಹಣ 2.5 ಲಕ್ಷಕ್ಕಿಂತಲೂ ಹೆಚ್ಚು ಎಂದೇ ಭಾವಿಸಲಾಗಿದೆ. ಅಲ್ಲದೇ, ಈ ಹಣದ ವಾರಸುದಾರರು ಯಾರು ಅನ್ನುವ ಪ್ರಶ್ನೆಗೆ ಉತ್ತರವೂ ಸಿಕ್ಕಿಲ್ಲ.

नाले में बह रहे थे 500 के ढेर सारे नोट, टूट पड़े लोग, भीड़ ने करीब 2.5 लाख  रुपये बटोरे

In an unexpected turn of events, a stream in Aatpadi, Sangli district, has turned into a literal cash flow. The waters were not just carrying their usual debris but were instead brimming with RS 500 notes, sparking a gold rush-like frenzy among the locals.

As soon as word got out, a crowd gathered by the stream, astonished to see genuine Rs 500 notes floating downstream. Without a second thought, citizens leapt into the water to collect as many of the notes as they could. It’s estimated that around ₹2 to ₹2.5 lakh in currency has been retrieved so far.

Related posts

Leave a Comment