ಇಂದೋರ್: ಮುಂಜಾನೆಯೇ ಹುಡುಗಿಯರ ಜೀವಕ್ಕೆ ಕಾರು ಚಾಲಕ ಆಪತ್ತು ತಂದ ಘಟನೆ ವರದಿಯಾಗಿದೆ. ಅಪ್ರಾಪ್ತ ಬಾಲಕ ಕಾರು ಚಲಾಯಿಸಿ ಇಬ್ಬರ ಪ್ರಾಣಕ್ಕೆ ಕುತ್ತು ತಂದಿದ್ದಾನೆ. ಇಂತಹದೊಂದು ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಮನೆಯ ಹೊರಗೆ ರಂಗೋಲಿ ಹಾಕುತ್ತಿದ್ದ ಇಬ್ಬರು ಬಾಲಕಿಯರಿಗೆ ಕಾರಿನಿಂದ ಡಿಕ್ಕಿ ಹೊಡೆದ 17 ವರ್ಷದ ಬಾಲಕ ಕಾರು ಅಪಘಾತವಾಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾನೆ.
ಕಾರಿನಡಿ ಸಿಲುಕಿದ ಬಾಲಕಿಯರು ಸಹಾಯಕ್ಕಾಗಿ ಕಿರುಚಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಕಿರಿದಾದ ರಸ್ತೆಯೊಂದರಲ್ಲಿ ಮನೆಯ ಹೊರಗೆ ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರಿಗೆ ಡಿಕ್ಕಿ ಹೊಡೆದ ಕಾರು ಪಕ್ಕದ ಅಂಗಡಿಯನ್ನು ಕೂಡ ಧ್ವಂಸ ಮಾಡಿದೆ. ಅಪಘಾತದಿಂದ ಗಾಯಗೊಂಡ ಯುವತಿಯರನ್ನು ಪ್ರಿಯಾಂಶಿ ಪ್ರಜಾಪತಿ ಹಾಗೂ ನವ್ಯಾ ಪ್ರಜಾಪತಿ ಎಂದು ಗುರುತಿಸಲಾಗಿದೆ. ಗಾಯಾಳು ಹುಡುಗಿಯರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯ ನಂತರ ಸ್ಥಳದಿಂದ ಪರಾರಿಯಾಗಿದ್ದ ಅಪ್ರಾಪ್ತ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿದೆ.
https://x.com/Live_Hindustan/status/1851140036244230360
Indore, Madhya Pradesh: Car driven by minor boy runs over 2 girls doing Rangoli outside home, victims critical
In Indore, Madhya Pradesh, a fast-running car has brutally mowed down two girls doing Rangoli outside their home. The victims are said to be in a critical condition. In the video of the incident that has gone viral, two girls are seen doing Rangoli outside a quiet neighbourhood with a narrow road. A fast car comes and mows down the two girls and smashes inside an adjacent shop.