
ಬೆಳ್ತಂಗಡಿ: ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಗುರುವಾರ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಕುಂದಲಿಕೆ ನಿವಾಸಿ ಸಜೇಶ್ (26) ಮೃತ ಯುವಕ.
ಸಜೇಶ್ ಎನ್. ಆರ್. ಪುರ ಬಳಿ ಅಲ್ಯೂಮಿನಿಯಂ ಪ್ಯಾಬ್ರಿಕೇಶನ್ ಕೆಲಸಕ್ಕೆ ತೆರಳಿದ್ದು ಗುರುವಾರ ಮಧ್ಯಾಹ್ನ ಕೆಲಸದಿಂದ ಊಟಕ್ಕೆಂದು ತೆರಳುತಿದ್ದ ವೇಳೆ ಎದುರಿನಿಂದ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸಜೇಶ್ ಗಂಭೀರ ಗಾಯಗೊಂಡಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.