ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗವು ಇಂದಿನಿಂದ ಪ್ರಾರಂಭವಾಗಿ ಫೆ. 13 ರಂದು ಮುಕ್ತಾಯವಾಗಲಿದೆ. ಅಧಿವೇಶನದ 2ನೇ ಭಾಗವು ಮಾ. 10 ರಂದು ಪ್ರಾರಂಭವಾಗಿ ಏ. 4ರಂದು ಕೊನೆಗೊಳ್ಳಲಿದೆ. ಈ ಸಂಪೂರ್ಣ ಬಜೆಟ್ ಅಧಿವೇಶನವು 27 ಅಧಿವೇಶನಗಳನ್ನು ಹೊಂದಿರುತ್ತದೆ. ಬಜೆಟ್ ಅಧಿವೇಶನದ ಮೊದಲ ಭಾಗವು 9 ಅಧಿವೇಶನಗಳನ್ನು ಹೊಂದಿರುತ್ತದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ. 1 ರಂದು ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2025 ಅನ್ನು ಮಂಡಿಸಲಿದ್ದಾರೆ. ಇನ್ನು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿರುವುದು ಇದು 8ನೇ ಬಾರಿ.
ಸಮಿತಿಯು ವರದಿಯನ್ನು ಅಂತಿಮಗೊಳಿಸುತ್ತದೆಯೇ ಅಥವಾ ಸರ್ಕಾರವು ಈ ಅಧಿವೇಶನಕ್ಕೆ ಮಸೂದೆಯನ್ನು ನಿಗದಿಪಡಿಸುತ್ತದೆಯೇ ಎಂದು ನೋಡಬೇಕಾಗಿದೆ. ಆಪ್ ಪಾಲಿಗೆ ದೆಹಲಿ ಚುನಾವಣಾ ಫಲಿತಾಂಶ ನಿರ್ಣಾಯಕವಾಗಲಿದ್ದು, ಅಧಿವೇಶನದತ್ತ ಚಿತ್ತ ಹರಿಸಲಿದೆ. ದೆಹಲಿ ಚುನಾವಣಾ ಕದನದಲ್ಲಿ ಹಲವಾರು ಮಿತ್ರಪಕ್ಷಗಳು ಎಎಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರೊಂದಿಗೆ ಇಂಡಿ ಮೈತ್ರಿಕೂಟದ ಒಡಕು ಆಡಳಿತ ಪಕ್ಷಕ್ಕೆ ಒಂದು ರೀತಿಯಲ್ಲಿ ನೈತಿಕ ಬಲ ಹೆಚ್ಚಿಸಿದೆ ಎಂದು ಹೇಳಲಾಗಿದೆ.
