Mangalore and Udupi news
ಅಪಘಾತಕಾಸರಗೋಡುದೇಶ- ವಿದೇಶ

ಮರ ಕಡಿಯುತ್ತಿದ್ದಾಗ ನಿರ್ಲಕ್ಷ್ಯ; ಬೈಕ್ ಸವಾರನ ಜೀವಕ್ಕೆ ಮುಳುವಾದ ಹಗ್ಗ

ರಸ್ತೆ ಬದಿ ಮರ ಕಡಿಯುತ್ತಿದ್ದಾಗ ಸಂಚರಿಸುತ್ತಿದ್ದ ಬೈಕ್ ಸವಾರನ ಕುತ್ತಿಗೆ ಹಗ್ಗ ಸಿಲುಕಿ ದುರಂತ ಸಾವನ್ನಪ್ಪಿದ ಘಟನೆ ನಡೆದಿದೆ. ಕೇರಳದ ಪತ್ತನಂತಿಟ್ಟಂನ ತಿರುವಳ್ಳ ಮುತ್ತೂರಿನಲ್ಲಿ ಘಟನೆ ನಡೆದಿದೆ. ಆಲಪ್ಪುಳ ತಕಜಿ ಮೂಲದ ಸೈಯದ್ ಮೃತಪಟ್ಟ ಬೈಕ್ ಸವಾರ

ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗಕ್ಕೆ ಸಿಲುಕಿ ವ್ಯಕ್ತಿ ದಾರುಣ ಅಂತ್ಯ ಕಂಡಿದ್ದಾರೆ. ಸೈಯದ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸೈದ್‌ನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ.

ನಿರ್ಲಕ್ಷö್ಯ ವಹಿಸಿದ ಗುತ್ತಿಗೆದಾರನ ಬಂಧನ
ರಸ್ತೆ ಬದಿಯ ಮರ ಕಡಿಯುವಾಗ ಎಚ್ಚರಿಕೆ ವಹಿಸಬೇಕು. ಗುತ್ತಿಗೆದಾರರು ಹಾಗೂ ಕಾರ್ಮಿಕರು ನಿರ್ಲಕ್ಷö್ಯ ವಹಿಸಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಯಾವುದೇ ಮುನ್ಸೂಚನೆ ನೀಡಿಲ್ಲ. ಮರ ಕಡಿಯುವಾಗ ಯಾವುದೇ ಸುರಕ್ಷತಾ ಕ್ರಮಗಳು ಕೈಗೊಂಡಿಲ್ಲ ಎಂಬುವುದು ದೃಢವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ, 105 ಅಡಿಯಲ್ಲಿ ಕೇಸು ದಾಖಲಾಗಿದೆ.

ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆ ಗುತ್ತಿಗೆದಾರ ಹಾಗೂ ಕಾರ್ಮಿಕರನ್ನು ಬಂಧಿಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಎಚ್ಚರಿಕೆಯ ಫಲಕಗಳು ಇರಲಿಲ್ಲ. ಹಗ್ಗ ಕಟ್ಟಿದ ಬಗ್ಗೆ ವಾಹನಗಳಿಗೆ ಮಾಹಿತಿ ನೀಡಲು ಜನರನ್ನು ನಿಲ್ಲಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರ ವೈಫಲ್ಯಗಳು ಅಪಘಾತಕ್ಕೆ ಕಾರಣವಾಗಿವೆ.

Related posts

Leave a Comment