Mangalore and Udupi news
ಪ್ರಸ್ತುತಮನೋರಂಜನೆ

ಬಿಗ್‌ಬಾಸ್‌ನಿಂದ ಹೊರ ಬಂದ ಚೈತ್ರಾ ಕುಂದಾಪುರ; ಆಗಿದ್ದೇನು?

Advertisement

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಬಿಗ್‌ಬಾಸ್ ಸೀಸನ್ 11ರ ಸ್ಫರ್ಧಿ ಚೈತ್ರಾ ಕುಂದಾಪುರ ಮೇಲೆ ಹಲವು ಕೇಸ್‌ಗಳು ಇವೆ. ಬಿಗ್ ಬಾಸ್‌ನಲ್ಲಿ ಉತ್ತಮವಾಗಿ ಆಡುತ್ತಿರುವ ಇವರ ಮೇಲೆ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣವಿದೆ.

ಈ ಪ್ರಕರಣ ಸದ್ಯ ಕೋರ್ಟ್ ಅಂಗಳದಲ್ಲಿ ಇದೆ. ಈ ಪ್ರಕರಣದಲ್ಲಿ ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್‌ನಿಂದ ಹೊರ ಬಂದು ಕೋರ್ಟ್ ಮೆಟ್ಟಿಲೇರಿದ್ದಾರೆ.

ಉದ್ಯಮಿ ಗೋವಿಂದಬಾಬು ಪೂಜಾರಿಗೆ ವಂಚಿಸಿದ್ದ ಆರೋಪ ಚೈತ್ರಾ ಹಾಗೂ ಗ್ಯಾಂಗ್ ಮೇಲೆ ಇದೆ. ಟಿಕೆಟ್ ಕೊಡಿಸುವುದಾಗಿ ಹೇಳಿ ಐದು ಕೋಟಿ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ಚೈತ್ರಾ, ಶ್ರೀಕಾಂತ್ ಸೇರಿ ಮೂವರು ಆರೋಪಿಗಳು ಕೋರ್ಟ್​ಗೆ ಹಾಜರು ಹಾಕಿದ್ದಾರೆ.

ಚೈತ್ರಾ ಬಿಗ್‌ಬಾಸ್ ಮನೆಯಿಂದ ನೇರವಾಗಿ ನ್ಯಾಯಾಲಯಕ್ಕೆ ಬಂದಿದ್ದಾರೆ. ವಾರಂಟ್ ರೀಕಾಲ್ ಮಾಡಿಕೊಂಡು ಮತ್ತೆ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ. ಅಲ್ಲಿ ಅವರು ಆಟ ಮುಂದುವರಿಸಲಿದ್ದಾರೆ.

ಸದ್ಯ ಕೋರ್ಟ್ ಮುಂದಿನ ವರ್ಷ ಜನವರಿ 13ಕ್ಕೆ ವಿಚಾರಣೆ ಮುಂದೂಡಿದೆ. ಅಲ್ಲಿಯವರೆಗೆ ಬಿಗ್ ಬಾಸ್ ಮನೆಯಲ್ಲೇ ಚೈತ್ರಾ ಇದ್ದರೆ ಮತ್ತೊಮ್ಮೆ ಅವರು ವಿಚಾರಣೆಗೆ ಹಾಜರಾಗಬೇಕಾಗುತ್ತದೆ.

ಈ ಮೊದಲು ಬಿಗ್ ಬಾಸ್ ನಿಂದ ಹೊರ ಬಂದರೆ ಅವರನ್ನು ಮತ್ತೆ ದೊಡ್ಮನೆಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಆಟದ ಶೈಲಿ ಬದಲಾಗಿದೆ. ಕಳೆದ ವರ್ಷ ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಕೇಸ್‌ನಲ್ಲಿ ಒಂದು ವಾರ ಜೈಲಿನಲ್ಲಿ ಇದ್ದು ಬಂದಿದ್ದರು. ಅವರನ್ನು ಮತ್ತೆ ಬಿಗ್ ಬಾಸ್ ಒಳಕ್ಕೆ ಕರೆದುಕೊಳ್ಳಲಾಯಿತು.

ಚೈತ್ರಾ ಅವರು ಈ ಮೊದಲು ಬಿಗ್ ಬಾಸ್ ನಿಂದ ಹೊರಕ್ಕೆ ಹೋಗಿದ್ದರು. ಅದಕ್ಕೆ ಕಾರಣ ಆಗಿದ್ದು ಅನಾರೋಗ್ಯ. ಅವರು ಬಿಗ್ ಬಾಸ್ ನಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದರು. ಈ ಕಾರಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೊರಗಿನ ವಿಚಾರಗಳನ್ನು ತಿಳಿದು ಬಂದು ಎಲ್ಲರಿಗೂ ಅದನ್ನು ಹೇಳಿದ್ದರು. ಈ ಕಾರಣಕ್ಕೆ ಸುದೀಪ್ ಅವರಿಂದ ಕ್ಲಾಸ್ ತೆಗೆದುಕೊಳ್ಳಬೇಕಾಯಿತು.

 

Related posts

Leave a Comment