ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಅಂದರೆ ಅದು ಬಿಗ್‌ಬಾಸ್. ಬಿಗ್ ಬಾಸ್ ಸೀಸನ್ 11 ನಡೆಯುತ್ತಿದೆ. ಕಿರುತೆರೆ ನಟಿ ಮೋಕ್ಷಿತಾ ಪೈ, ಕಾಮಿಡಿ ನಟ ಧನ್‌ರಾಜ್ ಆಚಾರ್ಯ, ಪ್ರಖರ ವಾಗ್ಮಿ ಚೈತ್ರಾ ಕುಂದಾಪುರ ಕರಾವಳಿ ಮೂಲದ ಸ್ಪರ್ಧಿಗಳು.
ಬಿಗ್ ಬಾಸ್ ಸೀಸನ್ 11 ಸಾಕಷ್ಟು ಮಟ್ಟಿಗೆ ಸುದ್ದಿಯಾಗುತ್ತಿದೆ. ದೊಡ್ಮನೆಯಲ್ಲಿರುವ ಸ್ಪರ್ಧಿಗಳು ಒಂದೊ0ದು ವಿಚಾರಕ್ಕೆ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಅದರಲ್ಲಿ ಗೌತಮಿ ಜಾಧವ್ ಅಲಿಯಾಸ್ ಸತ್ಯ ಕೂಡ ಒಬ್ಬರು.
ಝೀ ಕನ್ನಡದಲ್ಲಿ ಪ್ರಸಾರ ಕಂಡ ಸೂಪರ್ ಹಿಟ್ ಸೀರಿಯಲ್ ಸತ್ಯ. ಈ ಧಾರವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡವರು ಗೌತಮಿ. ಸತ್ಯ ಪಾತ್ರದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿಕೊಂಡವರು ಗೌತಮಿ ಜಾಧವ್.
ಬಿಗ್ ಬಾಸ್ ಮನೆಯಲ್ಲಿ ಎಲ್ಲೂ ಸಹ ತಮ್ಮ ವ್ಯಕ್ತಿತ್ವವನ್ನು ಬಿಟ್ಟುಕೊಡದೆ ಆಟ ಆಡುತ್ತಿದ್ದಾರೆ. ಮೃದು ಮಾತು, ಸರಳ ವ್ಯಕ್ತಿತ್ವ, ಎಲ್ಲರ ಜೊತೆಗೆ ಮಾತನಾಡುವ ಶೈಲಿಯಿಂದಲೇ ಜನರ ಮನಸ್ಸು ಕದ್ದಿದ್ದಾರೆ.
ವಿಗ್ ನಲ್ಲಿ ಬಂದ ಸತ್ಯ. ಬಿಗ್‌ಬಾಸ್ ಮನೆಗೆ ಶಾರ್ಟ್ ವಿಗ್ ಧರಿಸಿಯೇ ಬಂದಿದ್ದಾರೆ. ಸತ್ಯ ಸೀರಿಯಲ್ ನಲ್ಲಿ ಹೇಗೆ ಕಾಣಿಸಿಕೊಂಡರೋ ಅದೇ ರೀತಿ ಬಂದಿದ್ದಾರೆ. ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ ನಂತರ ವಿಗ್ ಕಳಚಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ ಗೌತಮಿ ಜಾಧವ್ ತುಳುನಾಡಿನ ಸೊಸೆ. ಈ ವಿಷಯ ಹಲವಾರು ಮಂದಿಗೆ ತಿಳಿದಿಲ್ಲ. ಸದ್ಯ ಗೌತಮಿ ಅವರು ಕರಾವಳಿಯ ಸೊಸೆ ಎಂಬುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಗೌತಮಿ ಜಾಧವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವರು 1993ರ ಆಗಸ್ಟ್ 22ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ಪತಿ ಅಭಿಷೇಕ್ ಕಾಸರಗೋಡು. ಕನ್ನಡ ಚಿತ್ರರಂಗ ಖ್ಯಾತ ಛಾಯಾಗ್ರಾಹಕರಾಗಿರುವ ಅಭಿಷೇಕ್ ಹಲವು ಸಿನೆಮಾಗಳಲ್ಲಿ ಕೆಲಸ ಮಾಡಿದ್ದಾರೆ.
ಅಭಿಷೇಕ್ ಕಾಸರಗೋಡು ಅವರು ಕಾಸರಗೋಡು ಮೂಲದವರು. ಕನ್ನಡ ಹಿರಿಯ ಸಿನೆಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಪುತ್ರ ಅಭಿಷೇಕ್ ಜಿ ಕಾಸರಗೋಡು. ಇಬ್ಬರದ್ದು ಅಂತರ್ಜಾತಿ ವಿವಾಹ ಎಂಬುವುದು ಸದ್ಯ ತಿಳಿದುಬಂದಿದೆ.
ಕಾಸರಗೋಡು ಮೂಲದವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕಾಸರಗೋಡಿನಲ್ಲಿ ಹುಟ್ಟಿ ಬೆಳೆದರೂ ಕನ್ನಡ ಸೊಗಸಾಗಿ ಮಾತನಾಡುತ್ತಾರೆ. ಗೌತಮಿ ಅವರು ಕರಾವಳಿಯ ಹುಡುಗನನ್ನಾ ವರಿಸಿದ್ದು ಎಂದು ಹಲವಾರು ಮಂದಿ ಆಶ್ಚರ್ಯಕ್ಕೀಡಾಗಿದ್ದಾರೆ.