“ಭುವನಂ ಗಗನಂ” ಸಿನಿಮಾದ ಪ್ರಿಮಿಯರ್ ಶೋ ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ ಫೆ.12ರಂದು ಪ್ರದರ್ಶನ ಕಂಡಿದೆ. ಫೆಬ್ರುವರಿ 14 ಪ್ರೇಮಿಗಳ ದಿನದಂದು ಭುವನಂ ಗಗನಂ ರಾಜ್ಯಾದ್ಯಂತ ತೆರೆಕಾಣಲಿದೆ. ಮಂಗಳೂರಿನಲ್ಲಿ ಚಿತ್ರದ ಪ್ರೀಮಿಯರ್ ಶೋ ಹೌಸ್‌ಫುಲ್ ಪ್ರದರ್ಶನ ಕಂಡಿದ್ದು, ವೀಕ್ಷಕರ ಮನಮುಟ್ಟಿದೆ.
ಪ್ರಮೋದ್ ಹಾಗೂ ಪೃಥ್ವಿ ಅಂಬರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಎಸ್‌ವಿಸಿ ಫಿಲಂಸ್ ಬ್ಯಾನರ್‌ನಡಿ ಎಂ. ಮುನೇಗೌಡ ಭುವನಂ ಗಗನಂ ನಿರ್ಮಿಸಿದ್ದಾರೆ. ಇದು ಸಂಪೂರ್ಣ ಫ್ಯಾಮಿಲಿ ಎಂಟೆರ್ನಾನ್ನ್ಮೆಂಟ್ ಕಥಾಹಂದರವಾಗಿದೆ. ಭುವನಂ ಗಗನಂ ಸಿನಿಮಾ ಲವ್, ರೊಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಮೂಲಕ ಸಾಗುತ್ತವೆ. ಎರಡು ಟ್ರ‍್ಯಾಕ್‌ನಲ್ಲಿ ನಡೆಯುವ ಕಥೆ ಹೊಂದಿದ್ದು ಪ್ರಮೋದ್ ಹಾಗೂ ಪೃಥ್ವಿ ಅಂಬರ್ ಅವರ ನಟನೆ ಸಿನೆಮಾದ ಬಲವಾಗಿದೆ. ಪೃಥ್ವಿ ಅಂಬರ್ ಹಾಗೂ ಪ್ರಮೋದ್ ನಟನೆ ಜನರ ಮನಮುಟ್ಟಿದೆ.
ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ ನಡೆದ ಪ್ರೀಮಿಯರ್ ಶೋ ಹೌಸ್‌ಫುಲ್ ಪ್ರದರ್ಶನ ಕಂಡಿದ್ದು, ಪ್ರೇಕ್ಷಕರ ಜೊತೆಗೆ ಸಿನೆಮಾ ತಂಡವು ಭಾಗಿಯಾಗಿತ್ತು. ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಪ್ರೀಮಿಯರ್ ಶೋನಲ್ಲಿ ಹಲವಾರು ತುಳು ಚಿತ್ರರಂಗದ ನಟರು, ನಿರ್ದೇಶಕರು ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರೇಮಿಗಳ ದಿನದಂದು ಭುವನಂ ಗಗನಂ ಸಿನಿಮಾದ ಕನ್ನಡ ಸಿನಿಮಾ ಪ್ರೇಮಿಗಳ ಎದುರು ಬರಲಿದೆ.
ಈಗಾಗಲೇ ಹಾಡು ಹಾಗೂ ಟ್ರೈಲರ್ ಯೂಟುಬ್ ನಲ್ಲಿ ಭಾರೀ ಸದ್ದು ಮಾಡಿದೆ. ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಪ್ರಮೋದ್ ಜೋಡಿಯಾಗಿ ರಚೆಲ್ ಡೇವಿಡ್ ಅಭಿನಯಿದ್ದಾರೆ. ಪೃಥ್ವಿ ಅಂಬರ್‌ಗೆ ಜೋಡಿಯಾಗಿ ಅಶ್ವಥಿ ನಟಿಸಿದ್ದಾರೆ. ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮಿನಾಡ್, ಹರಿಣಿ, ಸ್ಪರ್ಶ ರೇಖಾ ಹೀಗೆ ಖ್ಯಾತ ನಟ-ನಟಿಯರು ತಾರಾಗಣದಲ್ಲಿದ್ದಾರೆ.
ಎರಡು ಮುಗ್ದ ಮನಸ್ಸುಗಳ ಪಯಣದ ಭುವನಂ ಗಗನಂ ಸಿನೆಮಾ ಪ್ರಾಮಿಸಿಂಗ್ ಆಗಿದೆ. ಗಿರೀಶ್ ಮೂಲಿಮನಿ ಒಂದೊಳ್ಳೆ ಕಥೆಯನ್ನು ಆಯ್ಕೆ ಮಾಡ್ಕೊಂಡು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ಅದ್ಭುತ ಸಿನಿಮಾ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
