ಖಾಸಗಿ ಶಾಲೆಗಳ ಸ್ಕೂಲ್ ಫೀಸ್ ದುಬಾರಿಯಾಗಿರುತ್ತದೆ ಅನ್ನುವ ವಿಚಾರ ಗೊತ್ತೇ ಇದೆ. ಆದ್ರೆ ವರ್ಷದಿಂದ ವರ್ಷಕ್ಕೆ ಫ್ರೈವೆಟ್ ಸ್ಕೂಲ್ ಫೀಸ್‌ಗಳು ಗಗನಕ್ಕೇರುತ್ತಿವೆ. ಇದಕ್ಕೆ ಉತ್ತಮ ಉದಾಹರಣೆಯಂತಿರುವ ಪೋಸ್ಟ್ ಒಂದು ಇದೀಗ ಎಲ್ಲಡೆ ಹರಿದಾಡುತ್ತಿದೆ.
ಇಲ್ಲೊಂದು ಖಾಸಗಿ ಶಾಲೆ ಬರೀ ನರ್ಸರಿ ಮತ್ತು ಎಲ್.ಕೆ.ಜಿಯ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ಬರೋಬ್ಬರಿ 1.5 ಲಕ್ಷ ರೂ. ಶಾಲಾ ಶುಲ್ಕವನ್ನು ವಿಧಿಸಿದೆ. ಈ ದುಬಾರಿ ಶುಲ್ಕ ವಿವರದ ಫೋಟೋ ಇದೀಗ ವೈರಲ್ ಆಗುತ್ತಿದೆ.
2024-25 ರ ನರ್ಸರಿ ಮತ್ತು ಜ್ಯೂನಿಯರ್ ಕೆಜಿ ಬ್ಯಾಚ್‌ನ ಶಾಲಾ ಶುಲ್ಕ ರಶೀದಿಯ ಫೋಟೋ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಈ ಕುರಿತ ಪೋಸ್ಟ್ ಒಂದನ್ನು ಬೆಂಗಳೂರಿನ ವೈದ್ಯರಾದ ಡಾ. ಜಗದೀಶ್ ಚತುರ್ವೇದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊ0ಡಿದ್ದು, ‘ಕೇವಲ ಪೇರೆಂಟ್ ಓರಿಯೆಂಟೇಷನ್‌ಗೆ 8400 ಫೀಸ್ ಅಂತೆ, ಇದನ್ನೆಲ್ಲಾ ನೋಡಿ ಈಗ ನಾನು ಒಂದು ಶಾಲೆಯನ್ನು ತೆರೆಯಬೇಕೆಂದು ಪ್ಲಾನ್ ಮಾಡ್ತಿದ್ದೇನೆ’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
https://x.com/jagoinvestor_/status/1732258624263885142
ವೈರಲ್ ಆಗುತ್ತಿರುವ ಶಾಲಾ ಶುಲ್ಕ ವಿವರದ ಫೋಟೋದಲ್ಲಿ ಅಡ್ಮಿಶನ್ ಫೀಸ್, ಪೇರೆಂಟ್ ಓರಿಯೆಂಟೇಷನ್ ಫೀಸ್, ವಾರ್ಷಿಕ ಶುಲ್ಕ ಎಲ್ಲವನ್ನು ಸೇರಿಸಿ ಬರೋಬ್ಬರಿ 1,51,656 ರೂ. ಶಾಲಾ ಶುಲ್ಕವನ್ನು ವಿಧಿಸಿರುವ ದೃಶ್ಯವನ್ನು ಕಾಣಬಹುದು.
A school’s fees for nursery and KG classes have sparked outrage on the internet. According to a report, an unnamed school is charging as much as Rs 55,638 for nursery and junior KG admissions, along with an additional Rs 8,400 for parent orientation.
A picture of the fee structure was shared on X by Dr. Jagdish Chaturvedi. The breakdown includes Rs 55,638 as an admission fee, refundable caution money of Rs 30,019, annual charges of Rs 28,314, a one-time development fee of Rs 13,948, a tuition fee of Rs 23,737, and the Rs 8,400 parent orientation fee for nursery and junior KG admissions for the academic year 2024-25.