ಬೆಂಗಳೂರು: ಮಹಾಲಕ್ಷ್ಮಿಯ ಭೀಕರ ಹತ್ಯೆ ಕೇಸ್ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಆರೋಪಿಯನ್ನು ಬಂಧಿಸಲು ಹೋಗಿದ್ದ ಪೊಲೀಸರು ಕೂಡ ಶಾಕ್ ಆಗಿದ್ದರು. ಏಕೆಂದರೆ ಮಹಾಲಕ್ಷ್ಮಿಯನ್ನ ಕೊಂದ ಆ ಸೈಕೋ ಕಿಲ್ಲರ್ ಆತ್ಮಹತ್ಯೆ ಮಾಡಿಕೊಂಡಿದ್ದ. ಅಷ್ಟಕ್ಕೂ ಮಹಾಲಕ್ಷ್ಮಿ ಹಾಗೂ ಮುಕ್ತಿ ರಂಜನ್ ರಾಯ್ ಮಧ್ಯೆ ನಡೆದಿದ್ದಾದರೂ ಏನು ಎಂಬ ಗೊಂದಲ ಎಲ್ಲರಲ್ಲೂ ಮೂಡಿದೆ. ಇದೀಗ ಆ ನಿಗೂಢ ಪ್ರಶ್ನೆಗೂ ಉತ್ತರ ಸಿಕ್ಕಿದೆ.
ಹೌದು, ಒಂದಲ್ಲ ಎರಡಲ್ಲ ಒಟ್ಟು 59 ಪೀಸ್ಗಳನ್ನಾಗಿ ಮಹಾಲಕ್ಷ್ಮಿ ದೇಹವನ್ನು ಕಟ್ ಮಾಡಿದ್ದ ಎಸ್ಕೇಪ್ ಆಗಿದ್ದ ಆರೋಪಿ ಮುಕ್ತಿ ರಂಜನ್ ರಾಯ್. ಬಳಿಕ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗತ್ತು. ಆದರೆ ಇದೀಗ ಈ ಕೇಸ್ಗೆ ಮತ್ತೊಂದು ಹೊಸ ಟ್ವಿಸ್ಟ್ ಪೊಲೀಸರಿಗೆ ಸಿಕ್ಕಿದೆ.
ಸೆಪ್ಟೆಂಬರ್ 2ನೇ ತಾರೀಖಿನಂದು ಮಹಾಲಕ್ಷ್ಮಿಯನ್ನು ಕ್ರೂರವಾಗಿ ಕೊಲೆ ಮಾಡಲಾಗಿದೆ ಅಂತ ಪೊಲೀಸರಿಗೆ ತಿಳಿದು ಬಂದಿದೆ. ಸೆಪ್ಟೆಂಬರ್ 2ರಂದು ಮಹಾಲಕ್ಷ್ಮಿಗೆ ವಾರದ ರಜೆ ಇತ್ತು. ಹೀಗಾಗಿ ಅಂದು ಇಬ್ಬರು ಮಹಾಲಕ್ಷ್ಮಿ ಮನೆಯಲ್ಲೇ ಇದ್ದರು. ಜೊತೆಗೆ ನನ್ನ ಮದುವೆ ಮಾಡಿಕೋ ಎಂದು ಮಹಾಲಕ್ಷ್ಮಿ ಮುಕ್ತಿ ರಂಜನ್ ಪೀಡಿಸುತ್ತಿದ್ದಳಂತೆ. ಇದೇ ವಿಚಾರವಾಗಿ ಮಹಾಲಕ್ಷ್ಮಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿದ ದಿನವೇ ಆರೋಪಿ ಬೆಂಗಳೂರನ್ನು ಖಾಲಿ ಮಾಡಿ ಒರಿಸ್ಸಾಕ್ಕೆ ತೆರಳಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿ ರಂಜನ್ ಮೊಬೈಲ್ ಲ್ಯಾಪ್ ಟಾಪ್ ಪತ್ತೆಯಾಗಿದೆ. ಅದನ್ನ ಬೆಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದ್ರೆ ಈ ಆತ್ಮಹತ್ಯೆಯ ಹಿಂದಿನ ಎಲ್ಲಾ ಪ್ರೊಸೀಜರ್ ಮುಗಿದ ಮೇಲೆ ವೈಯಾಲಿಕಾವಲ್ ಪೊಲೀಸರಿಗೆ ನೀಡೋದಾಗಿ ದುಸೂರಿ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ವೈಯಾಲಿ ಕಾವಲ್ ಪೊಲೀಸರು ಒರಿಸ್ಸಾದಲ್ಲೇ ಬಿಡು ಬಿಟ್ಟಿದ್ದಾರೆ.
ಸದ್ಯ ಫ್ರಿಡ್ಜ್ನಲ್ಲಿಟ್ಟ ಮಹಾಲಕ್ಷ್ಮಿ ಮೊಬೈಲ್ ಅನ್ನು ವಶಕ್ಕೆ ಪಡೆದಿರುವ ವೈಯಾಲಿ ಕಾವಲ್ ಪೊಲೀಸರು ಎಕ್ಸ್ ಟ್ರಾಕ್ಟ್ ಎಫ್ಎಸ್ಎಲ್ ಕಳುಹಿಸಿದ್ದಾರೆ. ಇದಾದ ಬಳಿಕ ಈ ಕೊಲೆಯ ದಿನ ಏನೆಲ್ಲಾ ನಡೆಯಿತು ಎಂಬುವುದು ಬಗ್ಗೆ ಗೊತ್ತಾಗಲಿದೆ.