ಕಳ್ಳತನ ಮಾಡಿ ಬೈಕ್ ಮಾರಾಟ ಮಾಡೋರನ್ನ ನೋಡರ್ತೀರಾ, ಆದ್ರೆ ಕಸ್ಟಮರ್ ಗಳಿಂದ ಆರ್ಡರ್ ಪಡೆದು ನಂತರ ಯಾವ ಬೈಕ್ ಬೇಕೋ ಅದೇ ಬೈಕ್ ಕಳ್ಳತನ ಮಾಡೋ ಕಳ್ಳರನ್ನ ನೋಡಿದ್ದಿರಾ.? ರ‍್ಯಾಂಬೋ ಸಿನಿಮಾ ಶೈಲಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಬೈಕ್ ಕಳ್ಳರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಶಬಾಜ್ ಖಾನ್ ಹಾಗೂ ಓಂ ಬಂಧಿತ ಆರೋಪಿಗಳು.
ಯಾರಿಗಾದ್ರು ಕಡಿಮೆ ಬೆಲೆಗೆ ಯಾವ ಬೈಕ್ ಬೇಕಾದ್ರು ಕೊಡ್ತ ಇದ್ರು ಈ ಖತರ್ನಾಕ್ ಕಳ್ಳರು. ಕಸ್ಟಮರ್ ಸಿಕ್ಕಾಗ ಯಾವ ಬೈಕ್ ಬೇಕೋ ಅದೇ ಬೈಕನ್ನ ಕದ್ದು ಮಾರಾಟ ಮಾಡತಿದ್ದ ಆರೋಪಿಗಳು ಸದ್ಯ ಲಾಕ್ ಆಗಿದ್ದಾರೆ. ಆರೋಪಿಗಳು ಮೊದಲು ಕದ್ದ ಬೈಕ್ ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ್ದರು. ನಂತರ ಆನ್‌ಲೈನ್‌ನಲ್ಲಿ ಕಸ್ಟಮರ್ ಗಳು ಒಬ್ಬರ ಮೂಲಕ ಮತ್ತೊಬ್ಬರ ಪರಿಚಯವಾಗಿತ್ತು. ಹೀಗೆ ಕಳ್ಳರು ಕಸ್ಟಮರ್ ಗಳನ್ನ ಸಂಪರ್ಕ ಮಾಡುತ್ತಿದ್ದರು.
ಆನ್ಲೈನ್ ಅಲ್ಲಿ ಪರಿಚಯಯವಾಗಿ ಗೆಳೆಯರಾಗಿದ್ದ ಆರೋಪಿಗಳು. 15 ರಿಂದ 20 ಸಾವಿರಕ್ಕೆ ಬೈಕ್ಗಳನ್ನು ಮಾರಾಟ ಮಾಡುತ್ತಿದ್ದರು. ಮಾರಾಟದ ವೇಳೆ ಯಾರಿಗಾದರು ಕಡಿಮೆ ಬೆಲೆಗೆ ಬೈಕ್ ಬೇಕಿದ್ದರೆ ಕೇಳಿ , ಯಾವ್ ಬೈಕ್ಗಳಾದರು ನೀಡುತ್ತೇವೆ ಎಂದು ಹೇಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ .
ಬೈಕ್ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡ್ತಿದ್ದರು. ಕದ್ದ ಹಣದಿಂದ ವಿಲಾಸಿ ಜೀವನ ನಡೆಸುತ್ತಿದ್ದರು. ಬಂಧಿತ ಆರೋಪಿಗಳಿಂದ 12.5 ಲಕ್ಷ ಮೌಲ್ಯದ 13 ಬೈಕ್ ವಶಕ್ಕೆ ಪಡೆಯಲಾಗಿದೆ. ಈ ಸಂಬ0ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bengaluru: Parappana Agrahara police have arrested two who were stealing bikes in Rambo movie style. They used to get orders from customers and then steal whatever bike they wanted. Police have arrested such dangerous bike thieves.Shabaz Khan and Om arrested accused.
Once the accused had stolen the bike and sold it in online. Then the customers were introduced to each other online. Accused used to sell bikes for 15 to 20 thousand. Bike handle lock was broken and stolen. Both lived a luxurious life with the money earned from stolen bike sale. 13 bikes worth 12.5 lakhs have been seized from the arrested accused.