Mangalore and Udupi news
ಅಪರಾಧರಾಜ್ಯ

ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ವಂಚನೆ – ಫೈನಾನ್ಸ್ ಮ್ಯಾನೇಜರ್ ಅರೆಸ್ಟ್

ಸ್ನೇಹಿತರ ಹೆಸರಿನಲ್ಲಿ ಖಾತೆ ತೆರೆದು ನಕಲಿ ಚಿನ್ನ ಅಡವಿಟ್ಟು ಬರೋಬ್ಬರಿ 42 ಲಕ್ಷ ರೂ. ವಂಚಿಸಿದ್ದ ಘಟನೆ ನಡೆದಿದೆ. ದಾವಣಗೆರೆಯ ಜಗಳೂರಿನ ಕೆ.ಎಲ್.ಎಂ. ಆಕ್ಸಿವ ಫಿನ್ ವೆಸ್ಟ್ ಫೈನಾನ್ಸ್ ನಲ್ಲಿ ಈ ವಂಚನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ವ್ಯವಸ್ಥಾಪಕ ಅರವಿಂದ್ ಹನುಮಂತ ರೆಡ್ಡಿಯನ್ನು ಪೊಲೀಸರು ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ.

ಗ್ರಾಹಕರ ಚಿನ್ನವನ್ನು ಅಡವಿಟ್ಟುಕೊಂಡು ಸಾಲ ನೀಡುವ ಕೆ.ಎಲ್.ಎಂ. ಆಕ್ಸಿವ ಫಿನ್ ವೆಸ್ಟ್ ಪೈನಾನ್ಸ್ ವ್ಯವಸ್ಥಾಪಕ ಅರವಿಂದ ರೆಡ್ಡಿ ತಾನು ಕಾರ್ಯನಿರ್ವಹಿಸುವ ಸಂಸ್ಥೆಗೆ ವಂಚಿಸಿ ತಲೆಮರೆಸಿಕೊಂಡಿದ್ದ.

ಅವ್ಯವಹಾರ ನಡೆದಿರುವ ಬಗ್ಗೆ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಚಿತ್ರದುರ್ಗದ ಬಸ್ ನಿಲ್ದಾಣದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಅರವಿಂದ್ ಹನುಮಂತ ರೆಡ್ಡಿಯನ್ನು ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

Related posts

Leave a Comment