Mangalore and Udupi news
ಅಪಘಾತಪ್ರಸ್ತುತಮಂಗಳೂರು

ಸುರತ್ಕಲ್: ಮೂರು ವರ್ಷದಿಂದ ಕರಾವಳಿ ನೆಲೆಸಿದ್ದ ಬಾಂಗ್ಲಾ ಪ್ರಜೆ ಅರೆಸ್ಟ್

Advertisement

ಸುರತ್ಕಲ್: ಬಾಂಗ್ಲಾದೇಶದಿಂದ ಬಂದು ಅಕ್ರಮವಾಗಿ ಮಂಗಳೂರಲ್ಲಿ ನೆಲೆಸಿದ್ದ ಬಾಂಗ್ಲಾ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಆಂತರಿಕ ಭದ್ರತಾ ವಿಭಾಗ ಹಾಗೂ ಮಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಅನರುಲ್ ಶೇಖ್ (25) ಎಂಬಾತ ಬಂಧಿತ ಬಾಂಗ್ಲಾ ಪ್ರಜೆ.

ಮಂಗಳೂರು ಹೊರವಲಯದ ಸುರತ್ಕಲ್‌ನ ಮುಕ್ಕ ಎಂಬಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಮೂರು ವರ್ಷಗಳಿಂದ ಭಾರತದಲ್ಲಿ ತಲೆ ಮರೆಸಿಕೊಂಡಿದ್ದ ಬಾಂಗ್ಲಾದೇಶಿ ಅನರುಲ್ ಶೇಖ್ (25) ಎಂಬಾತನ್ನು ಬಂಧಿಸಿದ್ದಾರೆ. ಮುಕ್ಕದಲ್ಲಿ ಕಟ್ಟಡ ಕಾರ್ಮಿಕನಾಗಿದ್ದ ಅನರುಲ್ ಶೇಖ್ ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯವನು.

ಮೂರು ವರ್ಷಗಳ ಹಿಂದೆ ಇಂಡೋ- ಬಾಂಗ್ಲಾ ಅಂತಾರಾಷ್ಟ್ರೀಯ ಗಡಿರೇಖೆ ಲಾಲ್ ಗೋಲ್ ಮೂಲಕ ಒಳ ನುಸುಳಿದ್ದ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲಕ ಭಾರತದೊಳಗೆ ಬಂದಿದ್ದ ಅನರುಲ್ ಶೇಖ್ ಮೊದಲು ಉಡುಪಿಗೆ ಬಂದು ನೆಲೆಸಿದ್ದ ಎಂದು ವರದಿಯಾಗಿದೆ.

ಖಚಿತ ಮಹಿತಿ ಮೇರೆಗೆ ದಾಳಿ ನಡೆಸಿದ್ದ ಪೊಲೀಸ್ ಹಾಗೂ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಅನರುಲ್ ಶೇಖ್ ನ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Related posts

Leave a Comment