Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಇದರ 72 ಮಾಸಿಕ ಯೋಜನೆ ಹಸ್ತಾಂತರ

ಸೇವೆಯ ಪರಮ ಗುರಿಯನ್ನು ಇಟ್ಟುಕೊಂಡು ಸ್ಥಾಪನೆಯಾದ “ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಮಂಗಳೂರು” ಸೇವಾ ಸಂಸ್ಥೆಯು ತನ್ನ ಮಾಸಿಕ ಹಾಗೂ ತುರ್ತು ಸೇವಾ ಕಾರ್ಯದಲ್ಲಿ ಹಲವಾರು ಕುಟುಂಬಕ್ಕೆ ನೇರವಾಗಿ ಪ್ರಚಾರದ ಹಂಗಿಲ್ಲದೆ ಸಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಂದಿದೆ.

ತನ್ನ ಸೇವಾ ಪಯಣದಲ್ಲಿ ಮಾಸಿಕ ಸೇವಾ ಯೋಜನೆಯ ಮೂಲಕ 30 ತುರ್ತು ಯೋಜನೆಯೊಂದಿಗೆ 161 ಕುಟುಂಬಗಳಿಗೆ ಐವತ್ತು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಗಳು ಸಹಾಯಧನವನ್ನು ಸೇವಾ ರೂಪದಲ್ಲಿ ಸಮಾಜಕ್ಕೆ ನೀಡಿದೆ.

ಅಕ್ಟೋಬರ್ ತಿಂಗಳ 72 ಮಾಸಿಕ ಯೋಜನೆ ಹಸ್ತಾಂತರ ಕಾರ್ಯಕ್ರಮದಲ್ಲಿ 3 ಅಶಕ್ತ ಕುಟುಂಬಗಳಿಗೆ ₹ 1,00,000 ಧನಸಹಾಯ ಸೇವಾ ರೂಪದಲ್ಲಿ ನೀಡಿದ್ದಾರೆ.

ಕುಟುಂಬ 1:- ಶ್ರದ್ದಾ

ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ (NICU)ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಡ್ವೆಯ ಶ್ರದ್ದಾ ಅವರ (3 ತಿಂಗಳ) ಮಗುವಿನ ಸಂಪೂರ್ಣ ಚಿಕಿತ್ಸೆಗಾಗಿ ಸುಮಾರು 15ಲಕ್ಷಗಿಂತಲೂ ಅಧಿಕ ಖರ್ಚಾಗುತ್ತದೆ ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಮನವಿ ಸಲ್ಲಿಸಿದ್ದು ಅರ್ಥಿಕ ನೆರವಿನ ಅಗತ್ಯವಿದ್ದು ಇವರಿಗೆ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ವತಿಯಿಂದ ₹ 50,000 ಧನಸಹಾಯ ಸೇವಾ ರೂಪದಲ್ಲಿ ನೀಡಿದೆ.

ಕುಟುಂಬ 2:- ಸವಿನ್

ಜಯಲಕ್ಷ್ಮೀ W/o ಯಶವಂತ್ ಇವರ ಮಗು (ಸವಿನ್) ಅನಾರೋಗ್ಯದ ಬಗ್ಗೆ ಕಂಕನಾಡಿ ಆಸ್ಪತ್ರೆಯಲ್ಲಿ ತೋರಿಸಿದ್ದು, ಮಗುವಿಗೆ ಕಿಡ್ನಿ ಸಮಸ್ಯೆ ಇರುವುದಾಗಿ ಡಾಕ್ಟರ್ ತಿಳಿಸಿರುತ್ತಾರೆ. ಅದಕ್ಕೆ ಅಪರೇಷನ್ ಮಾಡಲು ಸುಮಾರು 3 ಲಕ್ಷದವರೆಗೆ ಖರ್ಚು ಇರುವುದಾಗಿ ತಿಳಿಸಿರುತ್ತಾರೆ. ಮಗುವಿಗೆ ಈಗ 9 ತಿಂಗಳು ಆಗಿರುತ್ತದೆ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಇವರಿಗೆ ಅಷ್ಟು ಖರ್ಚು ಭರಿಸಲು ಸಾಧ್ಯವಿಲ್ಲ ಆದುದರಿಂದ ಇವರಿಗೆ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ವತಿಯಿಂದ ₹ 25,000 ಧನಸಹಾಯ ಸೇವಾ ರೂಪದಲ್ಲಿ ನೀಡಿದೆ.

ಕುಟುಂಬ 3: ಅಕ್ಷಿತಾ

ಮಂಗಳೂರು ತಾಲೂಕಿನ ಕಲ್ಲಮುಂಡ್ಕೂರು ಗ್ರಾಮದ ಕಲಸಬೈಲು ನಿವಾಸಿಯಾದ ಅಕ್ಷಿತಾ ಇವರಿಗೆ 1 ವರ್ಷ ಆರು ತಿಂಗಳು ಇರುವಾಗ ಶುಗರ್ ಕಾಯಿಲೆ ಕಾಣಿಸಿಕೊಂಡಿದ್ದು 4 ವರ್ಷದಿಂದ ಚಿಕಿತ್ಸೆಗಾಗಿ ಸಾಕಷ್ಟು ಖರ್ಚು ಮಾಡಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ನೆರವಿನ ಅಗತ್ಯವಿದ್ದು ಇವರಿಗೆ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ವತಿಯಿಂದ ₹ 25,000 ಧನಸಹಾಯ ಸೇವಾ ರೂಪದಲ್ಲಿ ನೀಡಿದೆ.

ಈ ಹಸ್ತಾಂತರ ಕಾರ್ಯಕ್ರಮಕ್ಕೆ ಭುಜಂಗ ಕುಲಾಲ್ ಬಜರಂಗದಳ ಪ್ರಾಂತ ಸಹ ಸಂಚಾಲಕರು ಆಗಮಿಸಿದ್ದು, ಬಜರಂಗದಳ ಸೇವಾ ಬ್ರಿಗೇಡ್ ಇದರ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಭುಜಂಗ ಕುಲಾಲ್ ಅವರು “ಇಂತಹ ಸಂಘಟನಾ ಶಕ್ತಿ ಎಲ್ಲಾ ಸಂಘ ಸಂಸ್ಥೆಗಳಿಗೂ ಮಾದರಿ ಹಾಗೂ ನಿಮ್ಮ ಸೇವಾ ಕಾರ್ಯ ಹೀಗೆ ಮುಂದುವರಿಯಲಿ ಎಂದು ಶುಭಹಾರೈಸಿದರು”.

ಈ ಸಂದರ್ಭದಲ್ಲಿ ಮನೋಜ್ ಕೋಡಿಕೆರೆ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು, ವಸಂತ್ ಗುರುಪುರ ಜಿಲ್ಲಾ ಸತ್ಸoಗ್ ಪ್ರಮುಖು, ದಿನೇಶ್ ಮಿಜಾರ್  ಗುರುಪುರ ಪ್ರಖಂಡ ಕಾರ್ಯದರ್ಶಿ, ಸುರೇಶ್ ದೇವಾಡಿಗ ಅಧ್ಯಕ್ಷರು ಶ್ರೀ ರಾಮ ಮಂದಿರ ಟ್ರಸ್ಟ್, ಚಂದ್ರಕಾಂತ್ ನಾಯಕ್ ಅಧ್ಯಕ್ಷರು ಜೈ ಶ್ರೀ ರಾಮ್ ಶಾಖೆ ಎಡಪದವು ಉಪಸ್ಥಿತರಿದ್ದರು.

Related posts

Leave a Comment