ಮಂಗಳೂರು: ಈ ಸಂಸ್ಥೆಗೆ ಸೇವೆಯೇ ಪರಮೋ ಧರ್ಮ, ಇಲ್ಲಿ ಯಾವುದೇ ಪದಾಧಿಕಾರಿಗಳು ಇಲ್ಲ, ಹಿಂದೂ ಸಮಾಜದ ಅಶಕ್ತ ಕುಟುಂಬಗಳಿಗೆ ನೆರವಾಗುವ ಈ ತಂಡ ಎಲ್ಲಾ ಸಂಸ್ಥೆಗಳಿಗೂ ಮಾದರಿ. ಕೇವಲ ಹೆಸರಿಗಾಗಿ ಪ್ರಾರಂಭವಾದ ಸಂಸ್ಥೆ ಇದಲ್ಲಾ. ಸ್ವಾರ್ಥದಿಂದ ಕಾರ್ಯ ಮಾಡುವವರ ಮಧ್ಯೆ ತದ್ವಿರುದ್ಧವಾಗಿ ಎದ್ದು ನಿಂತ ಸಂಸ್ಥೆ. ಹತ್ತು ಯುವಕರ ತಂಡ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಹಲವು ವರ್ಷಗಳಿಂದ ಮೌನವಾಗಿ ಸಮಾಜದಲ್ಲಿ ಅಶಕ್ತರ ಕಂಬನಿ ಒರೆಸುತ್ತಿರುವ ಸಂಸ್ಥೆಯೇ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು.
ಹಿಂದೂ ಸಮಾಜದ ಅಶಕ್ತರನ್ನು ಗುರುತಿಸಿ, ಸಮಾಜವನ್ನು ಸಶಕ್ತಿಕರಣ ಮಾಡುವ ಪ್ರಯತ್ನ ಮಾಡುತ್ತಿರುವ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಸಂಸ್ಥೆಯ ಕಾರ್ಯ ಎಲ್ಲಾ ಸಂಸ್ಥೆಗಳಿಗೂ ಮಾದರಿ. ಪ್ರತಿ ತಿಂಗಳು ಸೇವಾ ಯೋಜನೆ ಮೂಲಕ ಬಡವರ ಕಣ್ಣೀರು ಒರೆಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದ್ದು, ಇವರ ಸಂಸ್ಥೆಯಲ್ಲಿ ಬಹಳ ವಿಶೇಷವೆಂದರೆ ಇದರಲ್ಲಿ ಯಾವ ಪದಾಧಿಕಾರಿಗಳು ಇಲ್ಲ ಎಲ್ಲರೂ ಕಾರ್ಯಕರ್ತರು ಒಂದೇ ರೀತಿಯಲ್ಲಿ ಕೆಲಸ ಮಾಡುವ ಸಮಾನ ಮನಸ್ಕರ ತಂಡವೇ ಸಂಸ್ಥೆಯ ಈ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ. ಎಲ್ಲಾ ಕಾರ್ಯಕರ್ತರು ಸಮಾನರು. ಯಾವುದೇ ಪಧಾಧಿಕಾರಿಗಳು ಇಲ್ಲದೇ ನಡೆಯುವ ಸಂಸ್ಥೆ ಅತೀ ವಿರಳ ಅದರಲ್ಲಿ ದೊಡ್ಡ ಮಟ್ಟದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿರುವ ಸಂಸ್ಥೆ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು.
ಕಳೆದ 6 ವರ್ಷಗಳಿಂದ ನಿಸ್ವಾರ್ಥವಾಗಿ ಸಮಾಜಮುಖಿ ಸೇವಾ ಕಾರ್ಯ ಮಾಡುತ್ತಿರುವ ಹೆಮ್ಮೆಯ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಮಂಗಳೂರು ಪ್ರಾರಂಭಗೊ0ಡ ನಂತರ ನಿರಂತರವಾಗಿ 57 ಮಾಸಿಕ ಯೋಜನೆ ಮೂಲಕ ಅಶಕ್ತರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಸಮಾಜ ಸೇವೆ ಮಾಡಿದೆ. ತಿಂಗಳಿಗೆ ಒಂದು ಪಾಲನ್ನು ಮೀಸಲಿಟ್ಟು ತಮ್ಮಿಂದ ಆಗುವ ಅಳಿಲು ಸೇವೆಯನ್ನು ನೀಡಿ ನಮ್ಮಲ್ಲೂ ಶ್ರೀಮಂತಿಕೆಗಿ0ತ ಹೃದಯ ಶ್ರೀಮಂತಿಕೆ ಇದೆ ಎಂದು ತೋರಿಸಿಕೊಟ್ಟವರೇ ಬಜರಂಗದಳ ಸೇವಾ ಬ್ರಿಗೇಡ್ ಇದರ ಹೆಮ್ಮೆಯ ಕಾರ್ಯಕರ್ತರು.
ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ತನ್ನ ಸೇವಾ ಪಯಣದಲ್ಲಿ 71 ಮಾಸಿಕ ಸೇವಾ ಯೋಜನೆಯ ಮೂಲಕ 29 ತುರ್ತು ಯೋಜನೆಯೊಂದಿಗೆ 158 ಕುಟುಂಬಗಳಿಗೆ 49,25,000 (ನಲವತ್ತೊಂಬತು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಗಳು) ಸಹಾಯಧನವನ್ನು ಸೇವಾ ರೂಪದಲ್ಲಿ ಸಮಾಜಕ್ಕೆ ನೀಡಿದೆ.
71 ನೇ ಸೇವಾ ಮಾಸಿಕ ಯೋಜನೆಯ ಹಸ್ತಾಂತರದ ವಿವರ
ಕುಟುಂಬ 1:-
ಮಂಗಳೂರು ತಾಲೂಕಿನ ಅಡ್ಡೂರು ನೂಯಿ ಇಂದಿರಾನಗರ ನಿವಾಸಿ ಸುಜಾತ ಶೆಟ್ಟಿ ಅವರ ಗಂಡ ವಿಧಿವಶರಾಗಿದ್ದು ಮನೆಯ ಅರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದು ಇವರಿಗೆ ಆರ್ಥಿಕವಾಗಿ ನೆರವಿನ ಅಗತ್ಯವಿದ್ದು, ನೆರವಿಗಾಗಿ ಮನವಿ ಸಲ್ಲಿಸಿದ್ದ ಇವರಿಗೆ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ವತಿಯಿಂದ 50,000 ರೂಪಾಯಿ ಧನಸಹಾಯ ಸೇವಾ ರೂಪದಲ್ಲಿ ನೀಡಿದೆ.
ಕುಟುಂಬ 2:-
ಮಂಗಳೂರು ತಾಲೂಕಿನ ತೆಂಕ ಮಿಜಾರು ಗ್ರಾಮದ ನೀರ್ಕೆರೆ ನಿವಾಸಿಯಾದ ಗಂಗಾಧರ ಇವರ ತಾಯಿ ಅನಾರೋಗ್ಯ ಸಮಸ್ಯೆಯಿಂದ ಚಿಕಿತ್ಸೆಗಾಗಿ 4 ರಿಂದ 5ಲಕ್ಷ ಖರ್ಚು ಮಾಡಿದ್ದು, ಕಳೆದ ತಿಂಗಳು ಇವರ ತಾಯಿ ಅನಾರೋಗ್ಯದಿಂದ ವಿಧಿವಶರಾಗಿದ್ದು ಚಿಕಿತ್ಸೆಗಾಗಿ ಸಾಕಷ್ಟು ಖರ್ಚು ಮಾಡಿದ ಕಾರಣ ಮನೆಯ ಅರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿತ್ತು ಇವರಿಗೆ ಆರ್ಥಿಕವಾಗಿ ನೆರವಿನ ಅಗತ್ಯವಿದ್ದು ನೆರವಿಗಾಗಿ ಮನವಿ ಸಲ್ಲಿಸಿದ್ದ ಇವರಿಗೆ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ವತಿಯಿಂದ 25,000 ರೂಪಾಯಿ ಧನಸಹಾಯ ಸೇವಾ ರೂಪದಲ್ಲಿ ನೀಡಿದೆ.
ಕುಟುಂಬ 3:-
ಮಂಗಳೂರು ತಾಲೂಕಿನ ಬೆಳ್ಳೆಚ್ಚಾರು ಸಮೀಪದ ಉರ್ಕಿ ನಿವಾಸಿಯಾದ ಸೌಮ್ಯಾ ಇವರ ಮದುವೆಯ ಕಾರ್ಯಕ್ಕಾಗಿ ಆರ್ಥಿಕವಾಗಿ ನೆರವಿನ ಅಗತ್ಯವಿದ್ದು ನೆರವಿಗಾಗಿ ಮನವಿ ಸಲ್ಲಿಸಿದ್ದ ಇವರಿಗೆ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ವತಿಯಿಂದ 25,000 ರೂಪಾಯಿ ಧನಸಹಾಯ ಸೇವಾ ರೂಪದಲ್ಲಿ ನೀಡಿದೆ.
ಇಷ್ಟೇ ಅಲ್ಲದೆ 50 ನೇ ಮಾಸಿಕ ಸೇವಾ ಯೋಜನೆ ಸುವರ್ಣ ಸೇವಾ ಸಂಭ್ರಮದ ಮೂಲಕ ಒಂದೇ ವೇದಿಕೆಯಲ್ಲಿ 12 ಆಶಕ್ತ ಕುಟುಂಬಗಳಿಗೆ ನೆರವಾಗಿದೆ ಹಾಗೂ ಇದರ ಎಲ್ಲಾ ಕಾರ್ಯಕರ್ತರು ತಮ್ಮ ಅಂಗಾAಗ ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ರಕ್ತದಾನ, ಶ್ರಮಾದಾನ, ಸ್ವಚ್ಚತೆ, ಗೋವಿಗೆ ಮೇವು ಇನ್ನೂ ಅನೇಕ ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯಕರ್ತರು ಜವಾಬ್ದಾರಿ ನಿರ್ವಹಿಸುತ್ತಿದ್ದು ಧರ್ಮರಕ್ಷಣೆಯ ಕಾರ್ಯದಲ್ಲೂ ನಿರಂತವಾಗಿ ತೋಡಗಿಸಿಕೊಂಡು ಬಂದಿದ್ದಾರೆ. ಇಂತಹ ಸೇವಾ ಮನೋಭಾವ ಹೊಂದಿದ ಸಂಸ್ಥೆ ನಮ್ಮ ನಡುವೆಯೇ ಇದೆ ಎನ್ನುವುದು ಜನರಿಗೆ ತಿಳಿದಿಲ್ಲ ಅಷ್ಟೂ ಮೌನವಾಗಿ ಅಶಕ್ತರ ಪಾಲಗೆ ಬೆಳಕಾಗಿ ನಿಂತಿದೆ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು.