ಅನಾದಿಕಾಲದಿಂದ ಇತಿಹಾಸ ಪ್ರಸಿದ್ಧವಾಗಿರುವ ಪುರಾತನ ಕೋಟೆದ ಬಬ್ಬು ದೈವಸ್ಥಾನ (ರಿ) ಕುಳಾಯಿ ಇದರ ವಾರ್ಷಿಕ ನೇಮೋತ್ಸವ ಹಾಗು ಮಾರಿಪೂಜೆ ಕಾರ್ಯಕ್ರಮವು ಇದೇ ಬರುವ ಮಾರ್ಚ್ 11ರಿಂದ ಮೊದಲುಗೊಂಡು ಮಾರ್ಚ್ 18ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ದಿ.11.03.2025 ನೇ ಮಂಗಳವಾರ ಬೆಳಿಗ್ಗೆ ಗಂಟೆ 9.00ಕ್ಕೆ ಸರಿಯಾಗಿ ಕಂಬೆರ್ಲ ಕಲ ಏರಿದ ನಂತರ, ಮಧ್ಯಾಹ್ನ ಗಂಟೆ 12.30ರಿಂದ 2.00ರ ವರೆಗೆ ಪುರಾತನ ಕೋಟೆದ ಬಬ್ಬು ದೈವಸ್ಥಾನದ ವಠಾರದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ.
ತಾ. 14.03.2025ನೇ ಶುಕ್ರವಾರ ಮೀನ ಸಂಕ್ರಮಣದಂದು ಬೆಳಿಗ್ಗೆ ಗಂಟೆ 7.00 ರಿಂದ ಸರಿಯಾಗಿ
ಬಗ್ಗುಂಡಿ ಕೆರೆಯಲ್ಲಿ ಹಿಂದಿನ ಕಾಲದಿಂದಲೂ ಸಾಂಪ್ರದಾಯಿಕವಾಗಿ ನಡೆದು ಬಂದ “ಮೀನು ಹಿಡಿಯುವ ಕಾರ್ಯಕ್ರಮ” ನಡೆಯಲಿದೆ.
ಅದೇ ದಿನ ರಾತ್ರಿ ಗಂಟೆ 10.00ಕ್ಕೆ ಸರಿಯಾಗಿ ಕೋಟೆದ ಬಬ್ಬು ದೈವದ ನೇಮೋತ್ಸವ ಮತ್ತು ತನ್ನಿಮಾನಿಗ ದೈವದ ನೇಮೋತ್ಸವ ಜರಗಲಿದೆ.
ನಂತರ ದಿ.15.03.2025 ರಂದು ಶನಿವಾರ ಸಂಜೆ ಗಂಟೆ 6.00 ಗಂಟೆಗೆ ಪಂಜುರ್ಲಿ ಗುಳಿಗ ದೈವದ ನೇಮೋತ್ಸವ ನಡೆದು, ನಂತರ ರಾತ್ರಿ ಗಂಟೆ 10.00ಕ್ಕೆ ಸರಿಯಾಗಿ ರಾಹು ಗುಳಿಗ ದೈವದ ನೇಮೋತ್ಸವ ನಡೆಯಲಿದೆ.