ಬದಿಯಡ್ಕ: ಕರಾವಳಿಯಲ್ಲಿ ಮಂಗಗಳ ಕಾಟ ಜಾಸ್ತಿಯಾಗುತ್ತಲೇ ಇದೆ. ಹಿಂಡು ಹಿಂಡಾಗಿ ಬರುವ ವಾನರ ಸೈನ್ಯ ಕೃಷಿಕರಿಗೆ ಮಾತ್ರವಲ್ಲದೆ, ಬೆಳೆಗಳನ್ನೂ ಹಾನಿ ಮಾಡುತ್ತಿದೆ. ಕಾಡಿನ ನಾಶ ಹಾಗೂ ಅವುಗಳಿಗೆ ಉಂಟಾಗುವ ಆಹಾರದ ಕೊರತೆಯಿಂದ ಸಿಕ್ಕ ಸಿಕ್ಕಲ್ಲಿಗೆ ಬಂದ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಮನೆಯ ಅಂಗಳಕ್ಕೇ ಬಂದು ಚೇಷ್ಟೆ ಮಾಡುತ್ತದೆ.
ಬದಿಯಡ್ಕದ ಮುಳಿಯಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳತ್ತಿಂಗಳ್ ಎಂಬಲ್ಲಿ ಕೋತಿಯೊಂದು ಮಹಿಳೆಯ ಮೇಲೆ ತೆಂಗಿನಕಾಯಿ ಎಸೆದಿದೆ.
ಕೃಷ್ಣನ್ ನಾಯರ್ ಎಂಬುವರ ಪತ್ನಿ ಸಾವಿತ್ರಿ ಅವರು ಮನೆಯ ಅಂಗಳದಲ್ಲಿ ಪಾತ್ರೆ ತೊಳೆಯುತ್ತಿದ್ದಾಗ ಅವಘಡ ನಡೆದಿದೆ. ಸಾವಿತ್ರಿ ಅವರ ಕೈ ಮೂಳೆ ಮುರಿದಿದ್ದು, ಚಿಕಿತ್ಸೆ ನೀಡಲಾಗಿದೆ. ಈ ಪ್ರದೇಶದಲ್ಲಿ ಕಾಡುಪ್ರಾಣಿಗಳು ನಿರಂತರವಾಗಿ ಕೃಷಿ ನಾಶ ಮಾಡುತ್ತಿದ್ದು, ಸ್ಥಳೀಯ ನಿವಾಸಿಗಳ ಮೇಲೆ ದಾಳಿ ಮಾಡುತ್ತಿವೆ.