Mangalore and Udupi news
ಪ್ರಸ್ತುತಮಂಗಳೂರುರಾಜ್ಯ

ಸ್ವಾಮಿಯೇ ಶರಣಂ ಅಯ್ಯಪ್ಪ: ಹರಿಹರಸುತನ ದರ್ಶನದ ನಂತರ ಮಾತು ಕಲಿತ ಬಾಲಕ – ಮಣಿಕಂಠನ ಮಹಿಮೆಗೆ ‘ಪ್ರಸನ್ನ’ನಾದ ಭಕ್ತ

Advertisement

ಕಲಿಯುಗದ ಭಕ್ತರ ಪ್ರಿಯ, ಕಷ್ಟ ಕಾರ್ಪಣ್ಯಗಳಿಗೆ ಮುಕ್ತಿ ನೀಡುವ ದೊರೆ ಶಬರಿಮಲೆ ವಾಸ ಅಯ್ಯಪ್ಪ ಸ್ವಾಮಿ. ಲಕ್ಷಾಂತರ ಪವಾಡಗಳಿಗೆ ಸಾಕ್ಷಿಯಾದ ದೇವನೀತ ಮಣಿಕಂಠ. ಶರಣಂ ಎಂದ ಭಕ್ತರನ್ನು ಹಾರೈಸುವ ವರಪ್ರದಾಯಕ ಪಂದಳ ಕಂದ. ಅಸಂಖ್ಯ ಭಕ್ತರು ನಂಬುವ ಪ್ರಮುಖ ಕ್ಷೇತ್ರ ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುವುದು ವಾಡಿಕೆ. ಈ ನಡುವೆ ಈ ಆಧುನಿಕ ಯುಗದಲ್ಲೂ ಶಬರಿಮಲೆ ಕ್ಷೇತ್ರದ ಪವಾಡವೂ ಆಗಾಗ ಕೇಳಿಬರುತ್ತಿದೆ.

Sabarimala Temple: History, Timings, Location

ಇಂಥಹುದೇ ಒಂದು ಪವಾಡ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಒಂದು ಶಬ್ದ ಮಾತನಾಡಲೂ ಆಗದ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದ. ಈ ಬಾರಿ ಮತ್ತೆ ಶಬರಿಮಲೆ ಏರಲು ಮಾಲೆ ಹಾಕಿರುವ ಈ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾರೆ.‌ ಆ ಮೂಲಕ ಮಣಿಕಂಠನ ಮಹಿಮೆ ಮತ್ತೊಮ್ಮೆ ನಿಜವಾಗಿದೆ.

AYYAPPAN | SABARIMALA PILGRIMAGE APRIL 2022 VIDEOS | TRIUNELVELI | PAMBA |  SABARIMALA | SANNIDHANAM - YouTube

ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಪ್ರಸನ್ನ ಇದೀಗ ಮಾತನಾಡುವ ಮೂಲಕ ಅಯ್ಯಪ್ಪ ಮಾಲಾಧಾರಿಗಳಿಗೆ ಅಚ್ಚರಿ ತಂದಿದ್ದಾರೆ. ಸಣ್ಣ ಮಕ್ಕಳು ಮೊದ ಮೊದಲಿಗೆ ಯಾವ ರೀತಿ ತೊದಲು ಮಾತನಾಡುತ್ತಾರೋ, ಅದೇ ರೀತಿಯಲ್ಲಿ ಈ ಬಾಲಕ ಮಾತನಾಡಲು ಆರಂಭಿಸಿದ್ದಾರೆ.

AYYAPPA: ಭಕ್ತನ ಭಕ್ತಿಗೆ ಮೆಚ್ಚಿ ವರಕೊಟ್ಟ ಶಬರಿಗಿರಿವಾಸ!! - thenewshour

ಒಂದು ಶಬ್ದವನ್ನೂ ಸರಿಯಾಗಿ ಮಾತನಾಡದ ಪ್ರಸನ್ನ ಅವರು ಕಳೆದ ವರ್ಷ ಕರುಣಾಮಯಿ ಅಯ್ಯಪ್ಪ ಭಕ್ತವೃಂದ ಪುತ್ತೂರು ಅವರ ತಂಡದಲ್ಲಿ ಅಯ್ಯಪ್ಪ ಮಾಲೆ ಹಾಕಿ, ನಲವತ್ತೆಂಟು ದಿನಗಳ ಕಾಲ ಕಠಿಣ ವೃತಾಚರಣೆ ನಡೆಸಿ ಶಬರಿಮಲೆ ಏರಿದ್ದರು.

ಸುಮಾರು 48 ಮೈಲು ದುರ್ಗಮ ಕಾಡಿನ ಹಾದಿಯಲ್ಲಿ ಸಾಗಿ ಸ್ವಾಮಿ ದರ್ಶನವನ್ನು ಪಡೆದಿದ್ದರು. ಇದೀಗ ಮಾತನಾಡಲು ಆರಂಭಿಸಿದ್ದಾನೆ. ಒಂದು ಶಬ್ದ ಮಾತನಾಡಲೂ ಒಂದು ವರ್ಷಗಳ ಹಿಂದೆ ಚಡಪಡಿಸುತ್ತಿದ್ದ ಈ ಬಾಲಕ ಇಂದು ಅಯ್ಯಪ್ಪ ಸ್ವಾಮಿಯ ಶರಣು ಕರೆಯುತ್ತಾರೆ.

AYYAPPA: ಭಕ್ತನ ಭಕ್ತಿಗೆ ಮೆಚ್ಚಿ ವರಕೊಟ್ಟ ಶಬರಿಗಿರಿವಾಸ!! - thenewshour

ಎಂಟು ಶರಣನ್ನು ಪ್ರಸನ್ನ ಯಾವುದೇ ತೊಂದರೆಯಿಲ್ಲದೆ ಕರೆಯುತ್ತಾರೆ. ಬಳಿಕದ ಶಬ್ದಗಳಲ್ಲಿ ಅಷ್ಟು ಸ್ಪಷ್ಟವಾಗಿಲ್ಲದಿದ್ದರೂ, ಅರ್ಥವಾಗುವಷ್ಟಿದೆ. ಈ ಬಾರಿ ಮತ್ತೆ ಅಯ್ಯಪ್ಪ ಮಾಲೆ ಧರಿಸಿ ಮಲೆ ಏರಲು ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಮಲೆ ಏರಿದರೆ ಪ್ರಸನ್ನ ಇನ್ನಷ್ಟು ಸ್ಪಷ್ಟವಾಗಿ ಮಾತನಾಡುವ ಸಾಧ್ಯತೆಯಿದೆ ಎನ್ನುವ ನಿರೀಕ್ಷೆಯಲ್ಲಿ ಹಿರಿಯ ಸ್ವಾಮಿಗಳಲ್ಲಿದೆ.

ಮೊದಲ ಬಾರಿಗೆ ಮಾಲೆ ಧರಿಸಲು ಬಂದಾಗ ಕೇಳಲು ಮತ್ತು ಮಾತನಾಡಲು ಆಗದ ಸ್ಥಿತಿಯಲ್ಲಿದ್ದ ಪ್ರಸನ್ನ ಅವರಿಗೆ ಇದೀಗ ಒಂದು ಕಿವಿ ಕೇಳಿಸುತ್ತಿದೆ, ಮಾತನಾಡಲು ಶಬ್ದಗಳು ಹೊರಡುತ್ತಿದೆ.

https://divineavatars.com คาสิโนสายมู เล่นได้ทุกเพศวัย Hindu Gods and  Goddesses - List of Deities in Hinduism

ಮೊದಲ ಬಾರಿಗೆ ಮಾಲೆ ಹಾಕಲು ಬಂದ ಸಂದರ್ಭದಲ್ಲಿ ಕೈ ಸನ್ನೆಯ ಮೂಲಕ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ನಂತರ ಮಾತನಾಡಲಾರಂಭಿಸಿರುವುದು ಗುರು ಸ್ವಾಮಿಗಳಿಗೆ ಸಂತಸ ತಂದಿದೆ. ಇಂತಹ ಹಲವು ಉದಾಹರಣೆಗಳನ್ನು ಹಿರಿಯ ಅಯ್ಯಪ್ಪ ಮಾಲಾಧಾರಿಗಳು ಉದಾಹರಣೆಯ ಸಹಿತ ನೀಡುತ್ತಾರೆ. ಈ ಸಾಲಿಗೆ ಪ್ರಸನ್ನ ಕೂಡಾ ಸೇರಿದ್ದು, ಅಯ್ಯಪ್ಪನ ಮಹಿಮೆಯಿಂದ ಎಲ್ಲವೂ ಸಾಧ್ಯ ಎನ್ನುವುದು ಮತ್ತೊಮ್ಮೆ ಜಗಜ್ಜಾಹಿರವಾಗಿದೆ.

ಪುತ್ತೂರಿನ ಮಹಾಲಿಂಗೇಶ್ವರ ಐಟಿಐ ನಲ್ಲಿ ಎರಡನೇ ವರ್ಷದ ಸಿವಿಲ್ ಡಿಪ್ಲೊಮಾ ಮಾಡುತ್ತಿರುವ ಪ್ರಸನ್ನ, ವರ್ಷದ ಹಿಂದೆ ತನಕ ಒಂದು ಶಬ್ದವನ್ನೂ ಮಾತನಾಡಲಾರದ ಸ್ಥಿತಿಯಲ್ಲಿದ್ದರು. ಇದೀಗ ಇವರ ಬದಲಾವಣೆ ಅವರ ಮೇಲೆ ಅಯ್ಯಪ್ಪ ಸ್ವಾಮಿ ದಯೆ ತೋರಿದ್ದಾನೆ ಅನ್ನುವುದು ಹಿರಿಯ ಅಯ್ಯಪ್ಪ ಮಾಲಾಧಾರಿಗಳ ಅಭಿಪ್ರಾಯವಾಗಿದೆ. ಆ ಮೂಲಕ ಅಯ್ಯಪ್ಪ ಸ್ವಾಮಿ ಕರುಣೆ ತೋರಿದ್ದಾನೆ.

Related posts

Leave a Comment