Mangalore and Udupi news
ಅಪರಾಧಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಉಡುಪಿ: ಎಂಡಿಎಂಎ ಮಾರಾಟ ಯತ್ನ- ಐವರು ಅರೆಸ್ಟ್.!!

ಉಡುಪಿ : ಎಂಡಿಎoಎ ಮಾರಾಟ ಮಾಡುತ್ತಿದ್ದ ಐವರನ್ನು ಉಡುಪಿ ಸಿಇಎನ್ ಪೊಲೀಸರು ಮರವಂತೆ ಬೀಚ್ ಬಳಿ ಬಂಧಿಸಿದ್ದಾರೆ.

ಆರೋಪಿಗಳನ್ನು ಅಬ್ರಾರ್ ಶೇಖ್ (22), ಮೊಹಮ್ಮದ್ ಇಸ್ಮಾಯಿಲ್ ಫರ್ಹಾನ್ (25), ಮೊಹಮ್ಮದ್ ಜಿಯಾಮ್ ಬೆಳ್ಳಿ (26), ನೌಮಾನ್ (27), ಮತ್ತು ಸಜ್ಜದ್ ಮುಸ್ತಾಕಿಮ್ ಕೆವಾಕ್ (21) ಎಂದು ಗುರುತಿಸಲಾಗಿದೆ.

15.59 ಗ್ರಾಂ ಎಂಡಿಎoಎ ಪುಡಿಯೊಂದಿಗೆ 78,000 ರೂ. 11,28,000 ಮೌಲ್ಯದ ಕಾರು (ಏಂ20ಒಆ7053) ಮತ್ತು 50,000 ಮೌಲ್ಯದ ಐದು ಮೊಬೈಲ್ ಫೋನ್‌ಗಳು, ಒಟ್ಟು ವಶಪಡಿಸಿಕೊಂಡ ಆಸ್ತಿ 12,56,000 ರೂ ಅಂದಾಜಿಸಲಾಗಿದೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ನೇತೃತ್ವದ ಸಿಇಎನ್ ಪೊಲೀಸ್ ಠಾಣೆ ತಂಡ, ಸಬ್ ಇನ್‌ಸ್ಪೆಕ್ಟರ್‌ಗಳಾದ ಪವನ್ ನಾಯಕ್ ಮತ್ತು ಸಿಬ್ಬಂದಿಗಳಾದ ಪ್ರವೀಣ್ ಕುಮಾರ್, ಪ್ರವೀಣ್, ರಾಜೇಶ್, ದೀಕ್ಷಿತ್, ನೀಲೇಶ್, ಮಾಯಪ್ಪ ಗಡಡೆ ಮತ್ತು ಸುದೀಪ್ ಅವರೊಂದಿಗೆ ಮರವಂತೆ ಬೀಚ್ ಬಳಿ ಎಂಡಿಎoಎ ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಐವರನ್ನು ಬಂಧಿಸಿದ್ದಾರೆ.

Advertisement

Related posts

Leave a Comment