ಕೇರಳ : ನರ್ಸಿಂಗ್ ವಿದ್ಯಾರ್ಥಿನಿಯೋಬ್ಬಳು ಹಾಸ್ಟೆಲ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಕೇರಳದ ಪತ್ತನಂತಟ್ಟದಲ್ಲಿ ನಡೆದಿದೆ. ಈ ಸಾವಿಗೆ ಸಹಪಾಠಿಗಳ ಪ್ರಚೋದನೆಯೇ ಕಾರಣ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬoಧಿಸಿದoತೆ ಮೂವರನ್ನು ಬಂಧಿಸಲಾಗಿದೆ.
ಮೃತಪಟ್ಟ ವಿದ್ಯಾರ್ಥಿನಿಯನ್ನು ಅಮ್ಮು ಸಜೀವ್ (21) ಎಂದು ಗುರುತಿಸಲಾಗಿದೆ. ಬಂಧಿತರನ್ನು ಪಠಾಣಪುರಂ ನಿವಾಸಿ ಅಲೀನಾ, ಚಂಗನಾಶ್ಶೇರಿ ನಿವಾಸಿ ಅಕ್ಷಿತಾ ಮತ್ತು ಕೊಟ್ಟಾಯಂ ನಿವಾಸಿ ಅಂಜನಾ ಎನ್ನಲಾಗಿದೆ.
ಚುಟ್ಟಿಪಾರ ಎಸ್‌ಎಸ್‌ಇ ನರ್ಸಿಂಗ್ ಕಾಲೇಜಿನ ನಾಲ್ಕನೇ ವರ್ಷದ ವಿದ್ಯಾರ್ಥಿ ಅಮ್ಮು ಸಜೀವ್ ನವೆಂಬರ್ 15 ರಂದು ಹಾಸ್ಟೆಲ್ ಕಟ್ಟಡದ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದರು. ಆದರೆ ಅಮ್ಮು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದು, ಸಹಪಾಠಿಗಳ ವಿರುದ್ಧ ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯು ಸಹಪಾಠಿಗಳ ವಿರುದ್ಧ ಕುಟುಂಬಸ್ಥರು ಆರೋಪ ಮಾಡಿದ್ದರು. ಅಮ್ಮು ಮಾನಸಿಕವಾಗಿ ಕುಗ್ಗಲು ಅವರೇ ಕಾರಣ ಎಂದು ಮನೆಯವರು ಹೇಳಿದ್ದು, ವಿದ್ಯಾರ್ಥಿನಿಯರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಒತ್ತಾಯಿಸಿದ್ದರು. ಸದ್ಯ ಸಹಪಾಠಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಈ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಮ್ಮು ಸಜೀವ್ (21) ಎಂಬ ಯುವತಿ, ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಲು ಕೇವಲ ಒಂದೇ ಒಂದು ತಿಂಗಳು ಬಾಕಿ ಇದ್ದಂತೆಯೇ ಇದೀಗ ಸಾವಿಗೆ ಶರಣಾಗುವ ಮೂಲಕ ತನ್ನ ಆಸೆ, ಕನಸ್ಸುಗಳನ್ನು ನುಚ್ಚನೂರು ಮಾಡಿಕೊಂಡಿದ್ದಾಳೆ. ಪತ್ತನಂತಿಟ್ಟ ಎಸ್‌ಎಂಇ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಹಾಗೂ ತಿರುವನಂತಪುರದ ಐರೂರ್‌ಪಾರ ರಾಮಪುರತುಪೊಯ್ಕಾ ಶಿವಂ ಮನೆಯ ಸಜೀವ್ ಮತ್ತು ರಾಧಾಮಣಿ ದಂಪತಿಯ ಪುತ್ರಿ ಅಮ್ಮು, ಶುಕ್ರವಾರ (ನ.15) ಹಾಸ್ಟೆಲ್ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾಳೆ.
ಈ ಬಗ್ಗೆ ತನಿಖೆ ಆಗಬೇಕೆಂದು ಪಟ್ಟುಹಿಡಿದಿರುವ ಆಕೆಯ ಪೋಷಕರು, ಸಾವಿನಲ್ಲಿ ನಿಗೂಢತೆ ಇದೆ ಎಂದು ಆರೋಪಿಸಿದ್ದಾರೆ.ಹಾಸ್ಟೆಲ್‌ನಲ್ಲಿದ್ದ ಸಹ ವಿದ್ಯಾರ್ಥಿಗಳ ಕಿರುಕುಳವೇ ಮಗಳ ಸಾವಿಗೆ ಕಾರಣ ಎಂದು ಕುಟುಂಬಸ್ಥರು ವಾದಿಸಿದ್ದಾರೆ. ಸದ್ಯ ಮೂವರು ವಿದ್ಯಾರ್ಥಿನಿಯರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.
Thiruvananthapuram: The family of a nursing student who died after falling from a hostel building in Pathanamthitta has alleged foul play. Ammu Sajeev (22), a fourth-year student at Chuttippara Government Nursing College in Pathanamthitta, passed away on Friday evening after falling from the third floor of the hostel building. Ammu was a native of Ayiroopara here.