Mangalore and Udupi news
ಅಪರಾಧದೇಶ- ವಿದೇಶ

ಹೆಂಡತಿ ಮನೆಗೆ ಬಂದ ಗಂಡನನ್ನು ಥಳಿಸಿ ಹತ್ಯೆಗೈದ ಸಂಬಂಧಿಕರು

Advertisement

ಆಳಪ್ಪುಳ: ಪತ್ನಿಯ ಮನೆಗೆ ಬಂದ ಗಂಡನನ್ನು ಸಂಬಂಧಿಕರು ಥಳಿಸಿ ಕೊಂದ ಘಟನೆ ನಡೆದಿದೆ. ತಿರ್ಕುನ್ನಪುಳ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಅರತುಪುಳ ಪೆರುಂಬಳ್ಳಿಯ ಪುತನಪರಂನ ವಿಷ್ಣು (34) ಮೃತಪಟ್ಟವರು.

ಐದು ವರ್ಷಗಳ ಹಿಂದಷ್ಟೆ ವಿಷ್ಣು ಅವರಿಗೆ ಮದುವೆಯಾಗಿತ್ತು. ನಾಲ್ಕು ವರ್ಷದ ಮಗುವಿದೆ. ಕಳೆದ ವರ್ಷದಿಂದ ಇಬ್ಬರ ನಡುವೆ ವೈಷಮ್ಯ ಉಂಟಾಗಿತ್ತು. ಕೆಲ ದಿನಗಳ ಹಿಂದಷ್ಟೇ ವಿಷ್ಣು ತನ್ನ ಮಗನನ್ನು ಪತ್ನಿಯ ತವರು ಮನೆಗೆ ಬಿಟ್ಟು ಬರಲು ಬಂದಾಗ ಸಂಬಂಧಿಕರು ಥಳಿಸಿ ಹತ್ಯೆ ಮಾಡಿದ್ದಾಗಿ ವಿಷ್ಣು ಪೋಷಕರು ಆರೋಪಿಸಿದ್ದಾರೆ.

ಪತ್ನಿಯ ಮನೆಗೆ ಬಂದ ಯುವಕನನ್ನು ಪತ್ನಿಯ ಸಂಬಂಧಿಕರು ಹೊಡೆದು ಕೊಂದಿದ್ದಾರೆ ಎಂಬ ಆರೋಪಿಸಿದ್ದಾರೆ. ಪತ್ನಿ ಮನೆಗೆ ಬಂದಾಗ ವಿಷ್ಣುವನ್ನು ಸಂಬಂಧಿಕರು ಥಳಿಸಿದ್ದಾರೆ. ನಂತರ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ವಿಷ್ಣುವನ್ನು ಹೊಡೆದು ಸಾಯಿಸಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ಘಟನೆಗೆ ಕುರಿತಂತೆ 5 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಒಂದೂವರೆ ವರ್ಷದಿಂದ ಹೆಂಡತಿ ಜೊತೆ ಜಗಳವಾಗುತ್ತಿತ್ತು. ಮಗುವನ್ನು ವಿಷ್ಣು ತನ್ನ ಹೆಂಡತಿಯ ಮನೆಗೆ ತಲುಪಿಸಲು ಬಂದಿದ್ದನು. ಇದೇ ವೇಳೆ ಪತ್ನಿಯ ಸಂಬಂಧಿಕರು ವಿಷ್ಣು ಜೊತೆ ವಾಗ್ವಾದ ನಡೆಸಿ ಅರ್ಧ ಗಂಟೆ ಕಾಲ ಅಮಾನುಷವಾಗಿ ಥಳಿಸಿದ್ದಾರೆ. ಹೊಡೆತದ ನಂತರ ವಿಷ್ಣು ಕುಸಿದು ಬಿದ್ದಿದ್ದಾನೆ. ನಂತರ ಅವರನ್ನು ಕಾಯಂಕುಲಂ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮೃತಪಟ್ಟಿದ್ದಾರೆ. ವಿಷ್ಣು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ತ್ರಿಕುನ್ನಪುಳ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Comment