ಕೇರಳದಲ್ಲಿ ಚಡ್ಡಿ ಗ್ಯಾಂಗ್ ಮತ್ತೆ ಸದ್ದು ಮಾಡುತ್ತಿದೆ. ಕೆಲ ವಾರಗಳ ಹಿಂದಷ್ಟೇ ಕೊಟ್ಟಾಯಂ ನಲ್ಲಿ ಕಾಣಿಸಿಕೊಂಡಿದ್ದ ಚಡ್ಡಿ ಗ್ಯಾಂಗ್ ಈಗ ಆಲಪ್ಪುಳದಲ್ಲೂ ನಿದ್ದೆಗೆಡಿಸಿದೆ. ಆಲಪ್ಪುಳದ ಮಣ್ಣಂಚೇರಿ ಕೋಮಲಾಪುರದಲ್ಲಿ ಚಡ್ಡಿ ಗ್ಯಾಂಗ್ ಮನೆ ಮೇಲೆ ದಾಳಿ ನಡೆಸಿ ದರೋಡೆ ಮಾಡಿದೆ.
ಮನ್ನಂಚೇರಿ ಪಂಚಾಯಿತಿ ವ್ಯಾಪ್ತಿಯ 11 ಮತ್ತು 12ನೇ ವಾರ್ಡ್ ನಲ್ಲಿ ಚಡ್ಡಿ ಗ್ಯಾಂಗ್ ಎರಡು ಮನೆಗಳಲ್ಲಿ ದರೋಡೆ ಮಾಡಿದ್ದಾಗಿ ಕೇರಳ ಸುದ್ದಿ ವರದಿ ಪ್ರಕಟಿಸಿದೆ. ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಗೃಹಿಣಿಯರ ಸರ ಕದ್ದಿದ್ದಾರೆ. ಕಳ್ಳರ ಚಲನವಲನ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಆರಂಭಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ತಿಂಗಳ ಮೊದಲ ವಾರದಲ್ಲಿ ಕಳ್ಳರ ಗುಂಪು ದಾಳಿ ನಡೆಸಿತ್ತು.
ಕಳೆದ ಅಕ್ಟೋಬರ್ 30 ರಂದು ಅಲಪ್ಪುಳದ ನೇತಾಜಿ ಜಂಕ್ಷನ್‌ನಲ್ಲಿ ಗ್ಯಾಂಗ್ ಇರುವುದನ್ನು ಖಚಿತಪಡಿಸುವ ವೀಡಿಯೊ ದೃಶ್ಯಗಳನ್ನು ಬಿಡುಗಡೆ ಮಾಡಲಾಗಿತ್ತು. ಬಳಿಕ ಕೆಲ ದಿನಗಳ ಕಾಲ ಪೊಲೀಸರು ರಾತ್ರಿ ಗಸ್ತು ನಡೆಸಿದ್ದರು. ಆ ಬಳಿಕ ಕಳ್ಳರ ಗ್ಯಾಂಗ್ ವಾಪಸ್ ಹೋಗಿರಬಹುದು ಎಂದು ಸ್ಥಳೀಯರು ಭಾವಿಸಿದ್ದಾರೆ. ಆದಾಗ್ಯೂ, ಚಡ್ಡಿ ಗ್ಯಾಂಗ್ ಅಲಪ್ಪುಳದಲ್ಲಿಯೇ ಬೀಡುಬಿಟ್ಟಿದ್ದು ದೃಢವಾಗಿದೆ.