
ಸುಳ್ಯ – ಕಾಸರಗೋಡು ರಸ್ತೆಯ ಕುಂಟಾರು – ಮುರೂರು ಮಧ್ಯೆ ಓಮ್ನಿ ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟ ಘಟನೆ ನಡೆದಿದೆ.
ಸುಳ್ಯದ ಅಜ್ಜಾವರ ಕರ್ಲಪ್ಪಾಡಿ ನಿವಾಸಿ ಕುಂಞಿ ಮೃತಪಟ್ಟವರು. ಈ ಘಟನೆ ಡಿ. 10 ಮಂಗಳವಾರ ನಡೆದಿದೆ.
ಅವರು ತನ್ನ ಮಗನನ್ನು ಕಾಸರಗೋಡಿಗೆ ಬಿಟ್ಟು ಬರುತ್ತಿದ್ದಾಗ ಕುಂಟಾರು ಕಳೆದು – ಮೂರೂರು ಸಮೀಪ ತಲುಪುತ್ತಿದ್ದಂತೆ ಕುಂಟಾರಿನ ಲಾರಿಯೊಂದು ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಓಮ್ನಿ ಕಾರು ನಜ್ಜುಗುಜ್ಜಾಗಿದ್ದು ಚಾಲಕ ಮಹಮ್ಮದ್ ಕುಂಞಿ ಆಸ್ಪತ್ರೆಗೆ ಕರೆತರುವ ವೇಳೆ ಮೃತಪಟ್ಟಿದ್ದಾರೆ.