Mangalore and Udupi news
ಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರುರಾಜ್ಯ

ಕರಿ ಮೆಣಸಿಗೆ ಜಿಎಸ್‌ಟಿ ರದ್ದು – ಸಂಸದ ಯದುವೀರ್ ಒಡೆಯರ್‌ಗೆ ಧನ್ಯವಾದ ಹೇಳಿದ ಬೆಳೆಗಾರರು

Advertisement

ಕೇಂದ್ರ ಸರ್ಕಾರ ಕರಿ ಮೆಣಸಿಗೆ ವಿಧಿಸಿದ್ದಂತಹ ಜಿಎಸ್‌ಟಿಯನ್ನು ಸಂಪೂರ್ಣ ತೆಗೆದು ಹಾಕಿದೆ. ಈ ಹಿನ್ನೆಲೆ ಕರಿಮೆಣಸು ಬೆಳೆಗಾರರು ಸಂಸದ ಯದುವೀರ್ ಒಡೆಯರ್‌ಗೆ ಧನ್ಯವಾದ ಸಲ್ಲಿಸಿದ್ದಾರೆ.

ಕೊಡಗಿನ ಗೋಣಿಕೊಪ್ಪ ಬೆಳೆಗಾರರೋಬ್ಬರಿಗೆ 1 ಕೋಟಿ ಜಿಎಸ್‌ಟಿ ಕಟ್ಟುವಂತೆ ನೋಟಿಸ್ ನೀಡಲಾಗಿತ್ತು. ತದನಂತರ ಅವರು ಕರ್ನಾಟಕ ಕಾಫಿ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್ ನಿಯೋಗದೊಂದಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಸಂಪರ್ಕಿಸಿ ಮನವಿಯನ್ನು ಸಲ್ಲಿಸಿದ್ದರು.

Health Benefits of Black Pepper

ಈ ವಿಚಾರವಾಗಿ ಸಂಸದ ಯದುವೀರ್ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನ ಸೆಳೆದಿದ್ದರು. ಈ ಕಾರಣದಿಂದ ಈಗ ಕರಿಮೆಣಸು ಬೆಳೆಗಾರರಿಗೆ ಕೇಂದ್ರ ಸಿಹಿಸುದ್ದಿ ನೀಡಿದ್ದು, ಕರಿಮೆಣಸು ಬೆಳೆಗೆ ಜಿಎಸ್‌ಟಿಯನ್ನು ರದ್ದು ಮಾಡಿ ಆದೇಶ ಹೊರಡಿಸಿದೆ ಎನ್ನಲಾಗಿದೆ. ಈ ಕಾರಣದಿಂದ ವಿವಿಧ ಬೆಳೆಗಾರ ಸಂಘಟನೆಗಳು ಸಂಸದ ಯದುವೀರ್ ಒಡೆಯರ್ ಅವರಿಗೆ ಕೃತಜ್ಞತೆ ಸಲ್ಲಿಸಿವೆ.

Related posts

Leave a Comment