Mangalore and Udupi news
ಅಪಘಾತಕಾಸರಗೋಡುಗ್ರೌಂಡ್ ರಿಪೋರ್ಟ್ಪ್ರಸ್ತುತ

ಉಡುಪಿ: ಗಾಳಿ ತುಂಬುತ್ತಿದ್ದಾಗ ಟಯರ್ ಸ್ಪೋಟ – ಯುವಕನಿಗೆ ಗಂಭೀರ ಗಾಯ

Advertisement

ಕೋಟೇಶ್ವರ: ಟಯರ್‌ಗೆ ಗಾಳಿ ತುಂಬುವ ವೇಳೆ ಟಯರ್ ಸ್ಪೋಟಗೊಂಡು ಯುವಕ‌ ಗಂಭೀರ ಗಾಯಗೊಂಡ ಘಟನೆ ನಡೆದಿದೆ.‌ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ ಬಳಿಯ ಟಯರ್‌ ರಿಪೇರಿ ಅಂಗಡಿಯೊಂದರಲ್ಲಿ ಈ ಘಟನೆ ಸಂಭವಿಸಿದೆ.

ಟಯರ್‌ಗೆ ಗಾಳಿ ತುಂಬುವ ಸಂದರ್ಭ ಅದು ಸಿಡಿದು ಸ್ಫೋಟಗೊಂಡ ಪರಿಣಾಮ ಗಾಳಿ ತುಂಬುತ್ತಿದ್ದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಅಬ್ದುಲ್‌ ರಜೀದ್‌ ಎಂದು ಗುರುತಿಸಲಾಗಿದೆ.

ಖಾಸಗಿ ಶಾಲೆಯ ಬಸ್‌ವೊಂದು ಟಯರ್‌ ಪ್ಯಾಚ್‌ ಹಾಕಲು ಬಂದಿದ್ದು, ಟಯರನ್ನು ಬಸ್ಸಿನಿಂದ ಕೆಳಗಿಳಿಸಿ ಗಾಳಿ ತುಂಬುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಟಯರ್‌ ಸ್ಫೋಟಗೊಂಡ ಬಳಿಕ ಅದರ ತೀವ್ರತೆಗೆ ಟಯರ್‌ ಡ್ರಮ್‌ ಬಸ್ಸಿನ ಮೇಲ್ಛಾವಣಿಯ ಮೇಲಕ್ಕೆ ಬಿದ್ದು ನೆಲಕ್ಕುರುಳಿತು. ಈ ಘಟನೆ ಕಳೆದ ಶನಿವಾರದಂದು ನಡೆದಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ.

ಗಾಳಿ ತುಂಬುವ, ಸ್ಫೋಟಗೊಳ್ಳುವ ಚಿತ್ರಣ ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು. ಈ ವೇಳೆ ಟಯರ್‌ ಡ್ರಮ್‌ ಮೇಲಕ್ಕೆ ಚಿಮ್ಮುವ ಹಾಗೂ ಗಾಳಿ ತುಂಬುತ್ತಿದ್ದ ಯುವಕ ಮೇಲಕ್ಕೆ ಹಾರಿ ಕೆಳಕ್ಕೆ ಬೀಳುವ ಚಿತ್ರಣ ಸೆರೆಯಾಗಿದೆ.

Related posts

Leave a Comment